ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಆಂಗಲ್‌ಗಳಲ್ಲಿಯೂ ಬ್ಯೂಟಿಫುಲ್ ಆಗಿ ಕಾಣುವ ಜಾಗ ಅಂದರೆ ಅದು ಹಿಮಾಲಯ. ಕರ್ನಾಟಕದಿಂದ ಹಿಮಾಲಯಕ್ಕೆ ಹೋಗೋಕೆ ಪ್ಲ್ಯಾನ್ ಮಾಡ್ತಿದ್ದೀರಾ? ಈ ಎಲ್ಲ ಡೀಟೇಲ್ಸ್ ತಿಳಿದುಕೊಳ್ಳಿ..
ಹಿಮಾಲಯ ಭಾರತದ ಈಶಾನ್ಯ ಭಾಗದಲ್ಲಿ ಹರಡಿಕೊಂಡಿದೆ. ಸರಿಸುಮಾರು 1,500 ಮೈಲುಗಳು (2,400 ಕಿಮೀ) ವಿಸ್ತರಿಸಿದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಭೂತಾನ್ ಮತ್ತು ನೇಪಾಳ ದೇಶಗಳ ಮೂಲಕ ಹಿಮಾಲಯ ಪರ್ವತ ಶ್ರೇಣಿಗಳು ಹಾದುಹೋಗುತ್ತವೆ. ಹಿಮಾಲಯ ಮೂರು ಸಮಾನಾಂತರ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ. ಇವುಗಳನ್ನು ಗ್ರೇಟರ್ ಹಿಮಾಲಯ, ಲೆಸ್ಸರ್ ಹಿಮಾಲಯ ಹಾಗೂ ಹೊರ ಹಿಮಾಲಯ ಎಂದು ಕರೆಯಲಾಗುತ್ತದೆ.
ಹಿಮಾಲಯದಲ್ಲಿ ಕಂಡುಬರುವ ಪರ್ವತಗಳು ಭೂಮಿಯ ಮೇಲಿನ ಅತಿ ಎತ್ತರದ ಪರ್ವತಗಳಾಗಿವೆ. ವಿಶ್ವದ ಹತ್ತು ಅತಿ ಎತ್ತರದ ಶಿಖರಗಳಲ್ಲಿ ಒಂಬತ್ತು ಶಿಖರಗಳು ಇಲ್ಲಿಯೇ ನೆಲೆಗೊಂಡಿವೆ. ಅವುಗಳಲ್ಲಿ ಮೌಂಟ್ ಎವರೆಸ್ಟ್ (8,849 ಮೀಟರ್), ಕೆ2 (8,611 ಮೀ.) ಮತ್ತು ಕಾಂಚನಜುಂಗಾ (8,586 ಮೀ.) ಸೇರಿವೆ.
ಹಿಮಾಲಯವು ಭಾರತದ 11 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಇದರಲ್ಲಿ ಹಿಮಾಲಯವು ಪಶ್ಚಿಮ ಬಂಗಾಳದಿಂದ ಸುಮಾರು 200 ರಿಂದ 300 ಕಿ.ಮೀ. ದೂರದಲ್ಲಿದೆ. ಇದು ಹಿಮಾಲಯದ ಪೂರ್ವ ಭಾಗದಲ್ಲಿದೆ. ಬಿಹಾರದ ಕೆಲವು ಭಾಗಗಳಿಂದ, ವಿಶೇಷವಾಗಿ ನೇಪಾಳ ಗಡಿಯ ಸಮೀಪವಿರುವ ಪ್ರದೇಶಗಳಿಂದ ಹಿಮಾಲಯದ ಅಂತರವು 200 ರಿಂದ 300 ಕಿ.ಮೀ.ಗಳ ದೂರವಿದೆ.
ಅಸ್ಸಾಂ ಮತ್ತು ಹಿಮಾಲಯದ ನಡುವಿನ ಅಂತರ 552 ಕಿ.ಮೀ. ಇದೆ. ಅಸ್ಸಾಂನಿಂದ ಹಿಮಾಲಯ ತಲುಪಲು ಸುಮಾರು 5 ಗಂಟೆ 27 ನಿಮಿಷಗಳು ಬೇಕಾಗುತ್ತದೆ. ಜಾರ್ಖಂಡ್ ಮತ್ತು ಹಿಮಾಲಯದ ನಡುವಿನ ಅಂತರ 581 ಕಿ.ಮೀ. ಜಾರ್ಖಂಡ್ನಿಂದ ಹಿಮಾಲಯ ತಲುಪಲು ಸರಿಸುಮಾರು 7 ಗಂಟೆ 27 ನಿಮಿಷಗಳು ಬೇಕಾಗುತ್ತದೆ.
ಉತ್ತರ ಪ್ರದೇಶದಿಂದ ಹಿಮಾಲಯದ ದೂರವು ವಿವಿಧ ಸ್ಥಳಗಳನ್ನು ಅವಲಂಬಿಸಿ ಬದಲಾಗುತ್ತದೆ. ಆದರೆ, ಸಾಮಾನ್ಯವಾಗಿ ಉತ್ತರ ಪ್ರದೇಶದ ಪೂರ್ವ ಭಾಗದಿಂದ ಹಿಮಾಲಯದ ಅಂತರವು 200ರಿಂದ 300 ಕಿ.ಮೀ. ದೂರವಾಗುತ್ತದೆ. ಹಿಮಾಲಯ ಪರ್ವತಗಳನ್ನು ನೋಡಲು ನೀವು ಬಸ್, ರೈಲು, ವೈಯಕ್ತಿಕ ಕಾರು ಮತ್ತು ವಿಮಾನದ ಮೂಲಕವೂ ಈ ರಾಜ್ಯಗಳಿಗೆ ಸುಲಭವಾಗಿ ಹೋಗಬಹುದು.
ಇನ್ನು ಕರ್ನಾಟಕದಿಂದ ಹಿಮಾಲಯಕ್ಕೆ 1,700 ಕಿ.ಮೀ. ದೂರವಿದೆ. ಕರ್ನಾಟಕದಿಂದ ಹಿಮಾಲಯಕ್ಕೆ ಹತ್ತಿರುವ ಪ್ರದೇಶಗಳಿಗೆ ವಿಮಾನದ ಮೂಲಕ ತೆರಳಲು 9 ರಿಂದ 11 ಗಂಟೆಗಳು ಬೇಕಾಗುತ್ತದೆ. ಬಸ್ ಮೂಲಕ ತೆರಳಿದರೆ ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ.