spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೂಗಲ್ ಮ್ಯಾಪ್ ನಿಂದ ಹೊಸ ಫೀಚರ್: ರೆಸ್ಟೋರೆಂಟ್ ನಲ್ಲಿ ಎಷ್ಟು ಜನಸಂದಣಿ ಇದೆ ಅಂತಲೂ ತಿಳಿಬೋದು!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ನಾವೆಲ್ಲಾದರೂ ಹೋಗಬೇಕೆಂದರೆ ನಮ್ಮ ಒಡನಾಡಿಯಾಗಿ ಸಿಗೋದು ಮೊಬೈಲ್. ಇದರಲ್ಲಿನ ಗೂಗಲ್ ನ ಫೀಚರ್ಸ್ ನಿಂದ ನಾವು ಇಡೀ ಜಗತ್ತನ್ನೇ ಸುತ್ತಬಹುದಾಗಿದೆ.
ಹಿಂದೆ ಎಲ್ಲಾ ನಾವು ಪ್ರಯಾಣಿಸುವಾಗ ಜನರ ಬಳಿ ಅಡ್ರೆಸ್ ಕೇಳಿ ಹೋಗುತ್ತಿದ್ದೆವು. ಆದರೆ ಈಗ ಎಲ್ಲವೂ ಗೂಗಲ್ ಮ್ಯಾಪ್ ನಲ್ಲೇ ಟ್ರಾಫಿಕ್ ಕಡಿಮೆ, ಸರಿಯಾದ ಶಾರ್ಟ್ ಕಟ್ ದಾರಿ ತೋರಿಸುತ್ತದೆ. ಈಗ ಗೂಗಲ್ ತನ್ನ ಮ್ಯಾಪ್ಸ್ ನಲ್ಲಿ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ.

ಏನದು ಹೊಸ ಫೀಚರ್?

ನಮ್ಮ ಹತ್ತಿರದ ಯಾವುದೇ ರೆಸ್ಟೋರೆಂಟ್, ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಇರುವ ಬಗ್ಗೆ ಮಾಹಿತಿ ನೀಡಲಿದೆಯಂತೆ.
ಕೋವಿಡ್ ಬಳಿಕ ಸಾಕಷ್ಟು ಮಂದಿ ಜನಸಂದಣಿ ಇರುವ ಪ್ರದೇಶಕ್ಕೆ ಹೋಗಲು ನಿರಾಕರಿಸುತ್ತಾರೆ. ಹೀಗಾಗಿ ಜನರಿಗೆ ಅನುಕೂಲವಾಗುವಂತೆ ಕಡಿಮೆ ಸಮಯದಲ್ಲಿ ಕೆಲಸ ಮುಗಿಯುವಂತೆ ಮಾಡಲು ಈ ಹೊಸ ಫೀಚರ್ ಪ್ರಾರಂಭಿಸುತ್ತಿದೆ.
ನೀವೆಲ್ಲಾದರೂ ಶಾಪಿಂಗ್, ಟ್ರಿಪ್, ಡೈನಿಂಗ್ ಹೋಗಲೂ ಪ್ಲಾನ್ ಮಾಡಿದ್ದರೆ ಅಂತಹ ಸ್ಥಳಗಳಲ್ಲಿ ಜನರು ಹೆಚ್ಚಿದ್ದಾರಾ? ಖಾಲಿ ಇದೆಯಾ ಎನ್ನುವ ಬಗ್ಗೆ ಮಾಹಿತಿ ನೀಡುವ ವಿಶೇಷ ಫೀಚರ್ ಪರಿಚಯಿಸಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss