Sunday, April 18, 2021

Latest Posts

ಮೊಬೈಲ್ ಚಾರ್ಜ್ ಬೇಗ ಆಗಬೇಕು ಅಂತ ಹೀಗೆ ಮಾಡ್ತೀರಾ? ಹಾಗಿದ್ದರೆ ಇಂದೆ ನಿಲ್ಲಿಸಿಬಿಡಿ..

ಎಲ್ಲರಿಗೂ ತಮ್ಮ ಮೊಬೈಲ್ ಚಾರ್ಚ್ 100% ಇರಲೇಬೇಕು. ಈ ವಿಚಾರದಲ್ಲಿ ಯಾರದ್ದು ತಕರಾರಿಲ್ಲ. ಯಾಕಂದರೆ ಈಗಿನ ಕಾಲದಲ್ಲಿ ನಮಗಿರುವ ಸೌಲಭ್ಯಗಳು, ಸಾಮಾಜಿಕ ಜಾಲತಾಣಗಳು, ಆಪ್ ಗಳು, ಗೇಮಿಂಗ್ ಗಳು ಮೊಬೈಲ್ ಬ್ಯಾಟರಿನ ಡ್ರೈ ಮಾಡುತ್ತದೆ. ಆದರೆ ನಾವು ಮೊಬೈಲ್ ಚಾರ್ಚ್ ಮಾಡುವಾಗ ತಿಳಿಯಬೇಕಾದ ಕೆಲವು ಅಂಶಗಳು ತುಂಬಾ ಮುಖ್ಯ..

• ರಾತ್ರಿ ಮೊಬೈಲ್ ನಲ್ಲಿ ಸಿನಿಮಾ, ಗೇಮ್ ಆಡಿಕೊಂಡು ರಾತ್ರಿ ಮೊಬೈಲ್ ಅನ್ನು ಚಾರ್ಜ್ ಗೆ ಹಾಕಬೇಡಿ. ಇದರಿಂದ ಬ್ಯಾಟರಿ ಲೈಫ್ ಬೇಗ ಹೋಗುತ್ತದೆ.
• ಇನ್ನೊಬ್ಬರ ಚಾರ್ಜರ್ ಬಳಸೋದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ನಿಮ್ಮ ಮೊಬೈಲ್ ನ ಬ್ಯಾಟರಿ ಬಾಳಿಕೆ ಮೇಲೆ ಪರಿಣಾಮ ಬೀರುತ್ತದೆ.
• ಹಣ ಜಾಸ್ತಿ ಕೊಡಬೇಕು ಎಂದು ಕಳಪೆ ಅಥವಾ ಡ್ಯುಪ್ಲಿಕೇಟ್ ಚಾರ್ಜರ್ ಕೊಳ್ಳಬೇಡಿ. ಇದನ್ನು ಬಳಸುವುದರಿಂದ ನಿಮ್ಮ ಮೊಬೈಲ್ ಬೇಗ ಹಾಳಾಗುತ್ತದೆ.
• ಫಾಸ್ಟ್ ಚಾರ್ಜ್ ಸಾಮರ್ಥ್ಯವಿರುವ ಚಾರ್ಜರ್ ಹೆಚ್ಚು ಬಳಸಬೇಡಿ. ಇದು ನಿಮ್ಮ ಮೊಬೈಲ್ ಬ್ಯಾಟರಿಯನ್ನು ಬಿಸಿ ಮಾಡುತ್ತದೆ. ಇದರಿಂದ ಬ್ಯಾಟರಿ ಮೇಲೆ ದುಷ್ಪರಿಣಾಮ ಬೀರುತ್ತದೆ.
• ಮೊಬೈಲ್ ನನ್ನು ಯಾವಾಗಲೂ ಚಾರ್ಜ್ ಗೆ ಹಾಕಬೇಡಿ. ಇದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬ್ಯಾಟರಿ 20%ಗೆ ಇಳಿದಾಗ ಚಾರ್ಜ್ ಹಾಕುವುದು ಉತ್ತಮ.
• ಚಾರ್ಜ್ ಮಾಡುವಾಗ ಬ್ಲೂಟೂತ್, ಇಂಟರ್ನೆಟ್ ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ. ಇದರಿಂದ ಮೊಬೈಲ್ ವೇಗವಾಗಿ ಚಾರ್ಜ್ ಆಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss