‘ಭಾರತದೊಂದಿಗೆ ಸಂಬಂಧ ಸುಧಾರಿಸಲು ಬಯಸಿದ್ದೆ ಆದರೆ…ʼ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ʼನನ್ನ ಅಧಿಕಾರಾವಧಿಯಲ್ಲಿ ಭಾರತದೊಂದಿಗೆ ಹದಗೆಟ್ಟ ಸಂಬಂಧವನ್ನು ಸುಧಾರಿಸಲು ಬಯಸಿದ್ದೆ. ಆದರೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮ ಅದಕ್ಕೆ ತಡೆಯಾಯಿತುʼ ಎಂದು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್‌ ಹೇಳಿದ್ದಾರೆ.
70 ವರ್ಷದ ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಖಾನ್, ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಇನ್ನಷ್ಟು ಒಲವು ತೋರಿದ್ದರು ಎಂದು ಹೇಳಿದರು.
“ನನ್ನ ಮೂರೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ನಾನು ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಬಯಸಿದ್ದೆ. ಆದರೆ ಆರ್‌ಎಸ್‌ಎಸ್ ಸಿದ್ಧಾಂತ ಮತ್ತು (ಜಮ್ಮು ಮತ್ತು ಕಾಶ್ಮೀರ) ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು ಅದಕ್ಕೆ ಅಡಚಣೆಯಾಗಿತ್ತು” ಎಂದು ತಮ್ಮ ಜಮಾನ್ ಪಾರ್ಕ್ ನಿವಾಸದಲ್ಲಿ ವಿದೇಶಿ ಪತ್ರಕರ್ತರ ಗುಂಪಿನೊಂದಿಗೆ ಸಂವಾದದ ಸಂದರ್ಭದಲ್ಲಿ ಅವರು ಹೇಳಿದರು.
2019 ರಲ್ಲಿ ಭಾರತವು ಕಾಶ್ಮೀರದ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ನಮ್ಮ ಸರ್ಕಾರವು ಭಾರತವನ್ನು ಮಾತುಕತೆಗೆ ಒತ್ತಾಯಿಸಲಿಲ್ಲ ಎಂದು ಖಾನ್ ಹೇಳಿದರು. “ಭಾರತವು ಮೊದಲು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಶಾಂತಿ ಮಾತುಕತೆ ನಡೆಸಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.
ಭಾರತದಲ್ಲಿ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಗೆಲ್ಲಬೇಕು ಮತ್ತು ಅವರು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಇಮ್ರಾನ್ ಖಾನ್‌ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದರು ಎಂಬುದನ್ನು ನೆನಪಿಸಿದಾಗ, “ಬಲಪಂಥೀಯ ಪಕ್ಷದ ನಾಯಕರೊಬ್ಬರು ಸಂಘರ್ಷವನ್ನು ಪರಿಹರಿಸುತ್ತಾರೆ ಎಂದು ನಾನು ಈಗಲೂ ನಂಬುತ್ತೇನೆ. ಮೋದಿ ಬಲಪಂಥೀಯ ಪಕ್ಷದವರು ಅವರು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವುದನ್ನು ನಾನು ಬಯಸುತ್ತೇನೆʼ ಎಂದು ಇಮ್ರಾನ್‌ ಖಾನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!