ತೆಲಂಗಾಣ ರಾಜಕೀಯದಲ್ಲಿ ವಾಕ್ಸಮರ: ಮೋದಿ ವಿರುದ್ಧ ನಾಲಗೆ ಹರಿಬಿಟ್ಟ ರೇವಂತ್ ರೆಡ್ಡಿ; ಬಿಜೆಪಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಹೇಳಿಕೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ರಾಮಾಯಣದ ಪಾತ್ರಕ್ಕೆ ಹೋಲಿಕೆ ಮಾಡಿದ ವಿಚಾರಕ್ಕೆ ಬಿಜೆಪಿ ಕಿಡಿಕಾರಿದ್ದು, ಇದನ್ನು ಸಂವಿಧಾನಿಕ ಹುದ್ದೆಗೆ ಅವಮಾನವೆಂದು ಖಂಡಿಸಿದೆ. ಭಾನುವಾರ ಬಿಜೆಪಿ ನಾಯಕರು ಈ ವಿಚಾರವಾಗಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ನಾಯಕರಿಗೆ ಮೇಲ್ದರ್ಜೆಯಿಂದಲೇ ಮೋದಿ ವಿರುದ್ಧ ಟೀಕೆ ಮಾಡಲು ಸೂಚನೆ ನೀಡಲಾಗುತ್ತಿದೆ ಎಂಬ … Continue reading ತೆಲಂಗಾಣ ರಾಜಕೀಯದಲ್ಲಿ ವಾಕ್ಸಮರ: ಮೋದಿ ವಿರುದ್ಧ ನಾಲಗೆ ಹರಿಬಿಟ್ಟ ರೇವಂತ್ ರೆಡ್ಡಿ; ಬಿಜೆಪಿ ಗರಂ