Saturday, June 10, 2023

Latest Posts

ಫ್ಲೈಒವರ್ ಮೇಲೆ ಪ್ರಧಾನಿಯನ್ನು ‘ಹಣಿಯುವ’ ಯೋಚನೆ ವರ್ಷದ ಮೊದಲೇ ಆಗಿತ್ತೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪ್ರಧಾನಿ ನರೇಂದ್ರ ಮೋದಿಯವರನ್ನು ಮೇಲ್ಸೇತುವೆ ಮೇಲೆ ಅಡ್ಡಗಟ್ಟಿ ಅವರ ಪ್ರಾಣಕ್ಕೆ ಅಪಾಯ ಒಡ್ಡುವ ಯೋಚನೆಯ ವಿಡಿಯೋಗಳು ಡಿಸೆಂಬರ್ 2020ರಲ್ಲೇ ಯೂಟ್ಯೂಬಿಗೆ ಏರಿದ್ದವು! ಅನಿಮೇಷನ್ ಉಪಯೋಗಿಸಿ ಮಾಡಿದ್ದ ಗೇಮಿಂಗ್ ಮಾದರಿ ವಿಡಿಯೋದಲ್ಲಿ, ಪಂಜಾಬಿನಲ್ಲಿ ಪ್ರಧಾನಿ ಮತ್ತವರ ವಾಹನಪಡೆಗೆ ಎದುರಾಗಿರುವಂಥದ್ದೇ ಸನ್ನಿವೇಶವನ್ನು ವಿವರವಾಗಿ ಚಿತ್ರಿಸಲಾಗಿತ್ತು.
ಇಡೀ ವಿಡಿಯೋದಲ್ಲಿ, ಪ್ರಧಾನಿಯವರನ್ನು ಹೀಗೆಯೇ ಅಡ್ಡಗಟ್ಟಿ ‘ಶಾಸ್ತಿ’ ಮಾಡಬೇಕು ಎಂದು ಪ್ರಚೋದನಾತ್ಮಕವಾಗಿ ಹಾಡು-ಅನಿಮೇಶನ್ ಗಳೊಂದಿಗೆ ಬಿಂಬಿಸಲಾಗಿತ್ತು. ಆಗ ಯಾರ ಕಣ್ಣಿಗೂ ಅಷ್ಟಾಗಿ ಬೀಳದಿದ್ದ ವಿಡಿಯೋಗಳು ಕೇವಲ ಕೆಲವೇ ಸಾವಿರ ವೀಕ್ಷಣೆಗಳನ್ನು ಪಡೆದಿದ್ದವು. ಆದರೀಗ, ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಅಭಿಮಾನಿಗಳು ಈ ದೃಶ್ಯಗಳನ್ನು ಹೆಕ್ಕಿ ತೋರಿಸುತ್ತಿದ್ದಂತೆ ಆ ವಿಡಿಯೋಗಳು ವೈರಲ್ ಆಗತೊಡಗಿವೆ. ಧಕ್ಕಾ ಗೇಮಿಂಗ್ ಎಂಬ ಯೂಟ್ಯೂಬ್ ಚಾನೆಲ್ 2020ರ ಡಿಸೆಂಬರ್ 1 ಮತ್ತು 6ನೇ ತಾರೀಖಿನಿಂದು ಪ್ರಧಾನಿ ಮೋದಿಯ ಪ್ರಾಣವನ್ನು ಗುರಿಯಾಗಿರಿಸಿಕೊಂಡಿರುವ ಗೇಮಿಂಗ್ ಮಾದರಿಯ ವಿಡಿಯೋವನ್ನು ಪ್ರಕಟಿಸಿತ್ತು.

ಪ್ರಧಾನಿಯ ಭದ್ರತೆಯಲ್ಲಾದ ಲೋಪ ಕೇವಲ ಅಜಾಗರೂಕತೆ ಆಗಿರದೇ ದೊಡ್ಡ ಸಂಚೇ ಕೆಲಸ ಮಾಡಿತ್ತೇ ಎಂಬ ಪ್ರಶ್ನೆಗಳು ಈಗ ದಟ್ಟವಾಗತೊಡಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!