ಲಂಕಾ ಎದುರು ಪಾಕ್‌ ಸೋತಿದ್ದಕ್ಕೆ ಆಫ್ಘನ್‌ನಲ್ಲಿ ಸಂಭ್ರಮಾಚರಣೆ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಸೋತಿದ್ದಕ್ಕೆ ಅಫ್ಘನ್‌ ಪ್ರಜೆಗಳು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಏಷ್ಯಾಕಪ್-2022 ಟೂರ್ನಿಯ ಅಂಗವಾಗಿ ನಡೆದ ಪಾಕಿಸ್ತಾನ-ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಎರಡೂ ತಂಡಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿತ್ತಾಡಿಕೊಂಡಿದ್ದು ಗೊತ್ತೇ ಇದೆ. ಪಾಕಿಸ್ತಾನದ ಗೆಲುವಿನ ನಂತರ ಅಫ್ಘಾನಿಸ್ತಾನ ಅಭಿಮಾನಿಗಳು ಆಕ್ರೋಶಗೊಂಡಿದ್ದರಿಂದ ಉಭಯ ತಂಡಗಳ ಅಭಿಮಾನಿಗಳು ವಾಗ್ವಾದ ನಡೆಸಿ ಪರಸ್ಪರ ಕುರ್ಚಿಗಳನ್ನು ಕೂಡ ಎಸೆದುಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಂಡಿತ್ತು. ಪಾಕಿಸ್ತಾನಕ್ಕೆ ಇಷ್ಟು ಸಾಕು ಎಂದು ಅಫ್ಘಾನ್ ಅಭಿಮಾನಿಗಳು ಪಟಾಕಿ ಸಿಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ಮಾಡಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ವೈರಲ್‌ ಆಗಿರುವ ವಿಡಿಯೋ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದಿದ್ದು, ಜನರು ಬೀದಿಗೆ ಬಂದು ಉತ್ಸಾಹದಿಂದ ನೃತ್ಯ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 23 ರನ್‌ಗಳ ಜಯ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!