66666: 6 ಎಸೆತಗಳಲ್ಲಿ 5 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ ʼಬೇಬಿ ಎಬಿʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವಕ್ರಿಕೆಟ್‌ ನಿಂದ ಸರ್ವಶ್ರೇಷ್ಠ ಬ್ಯಾಟ್ಸ್ಮನ್‌ ಎಬಿಡಿ ವಿಲ್ಲಿಯರ್ಸ್‌ ನಿವೃತ್ತರಾಗಿರಬಹುದು. ಆದರೆ ಎಬಿ ಅಭಿಮಾನಿಗಳಿಗೆ ಮೈದಾನದಲ್ಲಿ ಮನೋರಂಜನೆ ಒಂಚೂರು ಕಮ್ಮಿಯಾಗಿಲ್ಲ. ‘ಬೇಬಿ ಎಬಿ’ ಎಂದು ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾದವರೇ ಆದ ಡೆವಾಲ್ಡ್ ಬ್ರೆವಿಸ್ ನೋಡಿದವರಿಗೆಲ್ಲ ಎಬಿ ಆಟದ ವೈಭವವನ್ನು ನೆನಪಿಸುತ್ತಿದ್ದಾರೆ. ಸದ್ಯ ಸಿಪಿಎಲ್‌ ನಲ್ಲಿ ಆಡುತ್ತಿರುವ ಬ್ರೇವಿಸ್‌ ಆಟವನ್ನು ನೋಡಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಖುಷಿಯಲ್ಲಿ ತೇಲುತ್ತಿದ್ದಾರೆ.
ಕಳೆದ ಸೀಸನ್​ನಲ್ಲಿ ತಂಡ ಸೇರಿದ್ದ 19 ವರ್ಷದ ಡೆವಾಲ್ಡ್ ಬ್ರೆವಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಆಡುತ್ತಿರುವ ಬ್ರೇವಿಸ್‌  ಆರು ಎಸೆತಗಳಲ್ಲಿ 5 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್‌ನ 19  ನೇ ಒವರ್ ನಲ್ಲಿ ಕಣಕ್ಕಿಳಿದ ಬ್ರೇವಿಸ್‌  ಬರೋಬ್ಬರಿ 500 ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್‍ ಬೀಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.  ವಿಂಡೀಸ್ ಸ್ಪಿನ್ನರ್ ಅಕಿಲ್ ಹೊಸೈನ್ ಅವರ ಕೊನೆಯ 3 ಎಸೆತಗಳಲ್ಲಿ ಸತತ  ಸಿಕ್ಸರ್‌ಗಳನ್ನು ಸಿಡಿಸಿದರು. ಆ ಬಳಿಕ ಅವರಿಗೆ ಸ್ಕ್ರೈಕ್‌ ಸಿಕ್ಕಿದ್ದು 20 ನೇ ಓವರ್‌ ನ ಕೊನೆಯ ಎರಡು ಎಸೆತಗಳಲ್ಲಿ. ವೇಗಿ ಡೇರಿನ್ ಡುಪಾವಿಲ್ಲನ್ ಎಸೆದ ಕೊನೆಯ ಎರಡೂ ಎಸೆತಗಳನ್ನು ಸಿಕ್ಸರ್‌ ಗಟ್ಟಿದ ಬ್ರೇವಿಸ್‌ ಅದ್ಭುತವಾಗಿ ಇನ್ನಿಂಗ್ಸ್‌ ಮುಗಿಸಿದರು.

ಬೆಬಿ ಎಬಿ ಅಬ್ಬರದ ಬಲದಿಂದ ಪೇಟ್ರಿಯಾಟ್ಸ್ ತಂಡ 20 ಓವರ್‌ಗಳಲ್ಲಿ 163/6 ಕಲೆಹಾಕಿತು. ಅಂತಿಮವಾಗಿ ಏಳು ರನ್ ಗೆಲುವನ್ನು ಸಹ ದಾಖಲಿಸಿತು.
19 ವರ್ಷದ ದಕ್ಷಿಣ ಆಫ್ರಿಕಾ ಬ್ಯಾಟರ್ 9 ಇನ್ನಿಂಗ್ಸ್‌ಗಳಲ್ಲಿ 154.32 ಸ್ಟ್ರೈಕ್ ರೇಟ್‌ನಲ್ಲಿ 125 ರನ್ ಗಳಿಸಿದ್ದಾರೆ. ಕಳೆದ ಐಪಿಎಲ್ ನಲ್ಲಿ ಮುಂಬೈ ಪರ ಕೆಲವು ಪಂದ್ಯಗಳನ್ನಾಡಿದ್ದ ಬ್ರೇವಿಸ್‌ ಈ ಬಾರಿ ಹೆಚ್ಚಿನ ಅವಕಾಶಗಳನ್ನು ಪಡೆಯುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!