ಪೇಪರ್ ರಾಕೆಟ್ ಮೂಲಕ ಗಿನ್ನಿಸ್ ದಾಖಲೆ ಬರೆದ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಕ್ಕವಯಸ್ಸಿನಲ್ಲಿ ನೋಟ್‌ಪುಸ್ತಕಗಳ ಹಾಳೆಯಿಂದ ರಾಕೆಟ್‌ ಮಾಡಿ ಆಟವಾಡುತ್ತಿದ್ದುದು ಎಲ್ಲರಿಗೂ ನೆನಪಿರುತ್ತದೆ. ಕಾಗದದ ರಾಕೆಟ್ ಅನೇಕ ಜನರಿಗೆ ಅವರ ಬಾಲ್ಯವನ್ನು  ನೆನಪಿಸುತ್ತದೆ. ಇದೀಗ ಆ ಕಾಗದದ ರಾಕೆಟ್‌ ಮೂಲಕ ಒಬ್ಬ ವ್ಯಕ್ತಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.

ದಕ್ಷಿಣ ಕೊರಿಯಾದ ಕಿಮ್ ಕಿ ಟೇ ಎಂಬ ವ್ಯಕ್ತಿ ತಾನು ತಯಾರಿಸಿದ ಕಾಗದದ ರಾಕೆಟ್ ಅನ್ನು ಗಾಳಿಯಲ್ಲಿ ಎಸೆದನು. ಇದು ಸುಮಾರು 77.134 ಮೀ (252 ಅಡಿ 7 ಇಂಚು) ದೂರಕ್ಕೆ ಹಾರಿ ಕೆಳಗೆ ಬಿದ್ದಿದೆ.  2012 ರಲ್ಲಿ ಅಮೇರಿಕನ್ ಕ್ವಾರ್ಟರ್ಬ್ಯಾಕ್ ಜೋ ಅಯೋಬ್, ಏರ್ಪ್ಲೇನ್ ಡಿಸೈನರ್ ಜಾನ್ ಎಂ. ಕಾಲಿನ್ಸ್ ದಾಖಲೆ ನಿರ್ಮಿಸಿದ್ದು, ಇದೀಗ ಕಿಮ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಜೋ ಅಯೋಬ್ ಮತ್ತು ಕಾಲಿನ್ಸ್ ಎಸೆದ ರಾಕೆಟ್ ಸುಮಾರು 69.14 ಮೀಟರ್ (226 ಅಡಿ 10 ಇಂಚು) ದೂರ ಕ್ರಮಿಸಿತು. ಆ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಹೊಸ ದಾಖಲೆ ಬರೆದರು. ಈ ಸಂದರ್ಭದಲ್ಲಿ ಮಾತನಾಡಿದ ಕಿಮ್, ಸ್ನೇಹಿತರ ಬೆಂಬಲದಿಂದ ಈ ಗಿನ್ನಿಸ್ ದಾಖಲೆ ಸಾಧಿಸಿದ್ದೇನೆ ಎಂದರು. ಪೇಪರ್‌ ರಾಕೆಟ್‌ ಎಸೆತ ವಿಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ  ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!