spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತನ್ನ ಗಡ್ಡದಿಂದ 63 ಕೆಜಿ ತೂಕದ ಮಹಿಳೆಯನ್ನು ಎತ್ತಿ ವಿಶ್ವದಾಖಲೆ ಬರೆದ ವ್ಯಕ್ತಿ: ವಿಡಿಯೋ ವೈರಲ್

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಇಂದಿನ ಯುವಕರಿಗೆ ಗಡ್ಡ ಬೆಳೆಸುವುದು ಒಂದು ಸಾಮಾನ್ಯ ಕ್ರೇಜ್‌ ಆಗಿದೆ. ಯುವತಿಯರು ಕೂದಲಿನ ಆರೈಕೆಗೆ ಖಾಲಿ ಮಾಡುವಷ್ಟೇ ಹಣವನ್ನು ಯುವಕರು ಗಡ್ಡದ ಆರೈಕೆಗೆ ಖರ್ಚು ಮಾಡುತ್ತಿದ್ದಾರೆ. ಚೆನ್ನಾಗಿ ಗಡ್ಡ ಬೆಳೆದ ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ‌ ಸಾವಿರಾರು ಲೈಕ್ಸ್‌ , ಕಮೆಂಟ್ಸ್ ಪಡೆದು ಗಡ್ಡ ಬೆಳೆಸಿದ್ದಕ್ಕೂ ಸಾರ್ಥಕವಾಯ್ತು ಎಂದು ನಿಟ್ಟುಸಿರು ಬಿಡುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ನಿಮ್ಮಂತೆ ಗಡ್ಡ ಬೆಳೆಸಿ, ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಸುಮ್ಮನೆ ಕೂರಲಿಲ್ಲ. ತನ್ನ ಬಲಿಷ್ಠ ಗಡ್ಡದಿಂದ 63 ಕೆಜಿ ತೂಕದ ಮಹಿಳೆಯನ್ನು ಎತ್ತುವ ಮೂಲಕ  ವಿಶ್ವದಾಖಲೆ ನಿರ್ಮಿಸಿದ್ದಾರೆ.

ಹೌದು.. ನ್ಯೂಯಾರ್ಕ್‌ನ ಅಂಟಾನಾಸ್ ಕೊಂಟ್ರಿಮಾಸ್‌‌ ತನ್ನ ಉದ್ದ  ಗಡ್ಡಕ್ಕೆ ಸರಂಜಾಮು ಕಟ್ಟಿಕೊಂಡ ಅದರ ಸಹಾಯದಿಂದ  63 ಕೆಜಿ ತೂಕದ ಮಹಿಳೆಯನ್ನು ಎತ್ತಿದ್ದಾರೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ‘ರೆಕೋರ್ಲರ್ ದುನ್ಯಾಸಿ’ ಸೆಟ್‌ನಲ್ಲಿ ಕೊಂಟ್ರಿಮಾಸ್‌ ಈ ಸಾಹಸ ಪ್ರದರ್ಶಿಸಿದ್ದಾರೆ.

ಈ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 92 ಸಾವಿರ ಲೈಕ್‌ಗಳ ಜೊತೆಗೆ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

“ಅವರು ಗಡ್ಡಕ್ಕೆ ಯಾವ ಶಾಂಪು ಬಳಸುತ್ತಾರೆ? ಗಡ್ಡ ಇಷ್ಟೊಂದು ಗಟ್ಟಿಮುಟ್ಟಾಗಿರುವುದು ಹೇಗೆ?” ಎಂದೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

https://www.instagram.com/reel/CWcBdj2oJK6/?utm_source=ig_web_copy_link

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss