ದುರ್ಗಾಪೂಜಾ ಕಾರ್ನಿವಲ್‌ನಲ್ಲಿ ಮಮತಾ ಬ್ಯಾನರ್ಜಿ ಮಸ್ತ್‌ ಮಸ್ತ್‌ ಸ್ಟೆಪ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸದಾ ಸೀರಿಯಸ್ ಆಗಿ ಕಾಣುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿಳಿರುವ ವಿಡಿಯೋವೊಂದು ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೋಲ್ಕತ್ತಾದಲ್ಲಿ ದುರ್ಗಾ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಶನಿವಾರ ರಾತ್ರಿ ಅಲ್ಲಿನ ಸಾಂಪ್ರದಾಯಿಕ ನೃತ್ಯಕ್ಕೆ ದೀದಿ ಹೆಜ್ಜೆ ಹಾಕಿದರು.

ಇಲ್ಲಿನ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಯುನೆಸ್ಕೋ ಕೂಡ ಗುರುತಿಸಿದೆ. ಕೊಲ್ಕತ್ತಾದಲ್ಲಿ ಶನಿವಾರ ದುರ್ಗಾಪೂಜೆ ನಿಮಿತ್ತ ವಿಶೇಷ ಕಾರ್ನಿವಲ್ ಆಯೋಜಿಸಲಾಗಿತ್ತು. ಈ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಭಾಗವಹಿಸಿದ್ದರು. ಆಚರಣೆಯ ಅಂಗವಾಗಿ ಆದಿವಾಸಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶಿನದ ವೇಳೆ ಅಲ್ಲಿಯೇ ಇದ್ದ ಮಮತಾ ಬ್ಯಾನರ್ಜಿ ಅವರ ಜತೆ ಸೇರಿ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!