ಐಪಿಎಲ್‌ ಇತಿಹಾಸದಲ್ಲೇ 2ನೇ ಅತಿವೇಗದ ಎಸೆತ ಎಸೆದ ಉಮ್ರಾನ್‌ ಮಲಿಕ್!‌ ಉರಿವೇಗಕ್ಕೆ ಬ್ಯಾಟ್ಸ್‌ ಮನ್‌ಗಳು ಕಂಗಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬರೊಬ್ಬರಿ 157 ಕಿಮೀ ವೇಗದ ಎಸೆತ ಎಸೆಯುವ ಮೂಲಕ ಸನ್‌ ರೈಸರ್ಸ್‌ ಹೈದರಾಬಾದ್‌ ಸ್ಪೀಡ್‌ಸ್ಟಾರ್‌ ಉಮ್ರಾನ್ ಮಲಿಕ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೊಂದು ದಾಖಲೆಯನ್ನು ಮುರಿದರು. ಈ ಮೂಲಕ ಉಮ್ರಾನ್‌ ಈ ಆವೃತ್ತಿಯಲ್ಲಿ ಅತಿವೇಗದ ಬಾಲ್‌ ಎಸೆದ ದಾಖಲೆ ಮುರಿದರು. ಉಮ್ರಾನ್ ಇದೇ ಆವೃತ್ತಿಯಲ್ಲಿ ತಾವು ಎಸೆದಿದ್ದ 154.8KMPH ಮತ್ತು 156KMPH ದಾಖಲೆಯನ್ನು ತಾವೇ ಮುರಿದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಗೆ 154 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿದ್ದು ಈ ಆವೃತ್ತಿಯ ಫಾಸ್ಟೆಸ್ಟ್‌ ಬಾಲ್‌ ಆಗಿ ದಾಖಲಾಗಿತ್ತು.
ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಎಸೆದ ಎಸೆದ ದಾಖಲೆ ಶಾನ್ ಟೈಟ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಶಾನ್ ಟೈಟ್ 157.71  KMPH ಅಲ್ಲಿ ಬೌಲಿಂಗ್ ಮಾಡಿರುವುದು ಐಪಿಎಲ್ ದಾಖಲೆ. ಉಮ್ರನ್ ಮಲಿಕ್ ಅವರ ಎಸೆತ ( 157.00 KMPH) 2ನೇ ಸ್ಥಾನಕ್ಕೇರಿದ್ದರೆ, ದಕ್ಷಿಣ ಆಫ್ರಿಕಾದ ವೇಗಿ ಹಾಗೂ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಆನ್ರಿಚ್ ನೋರ್ಜೆ (156.22 KMPH) ಮೂರನೇ ಸ್ಥಾನದಲ್ಲಿದ್ದಾರೆ.
ಒಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ವಿರುದ್ಧ 20 ನೇ ಓವರ್‌ ಎಸೆಯಲು ಬಂದ ಉಮ್ರಾನ್ ಬ್ಯಾಕ್ ಟು ಬ್ಯಾಕ್ ಎಸೆತಗಳನ್ನು 156 ಮತ್ತು 157 ಕಿಮೀ ವೇಗದಲ್ಲಿ ಬೌಲ್‌ ಮಾಡಿದರು. ಇದು ಟಿ.20 ಇತಿಹಾಸದಲ್ಲೇ ಅತ್ಯಂತ ವೇಗದ ಓವರ್‌ ಗಳಲ್ಲೊಂದು ಎಂದು ದಾಖಲಾಗಿದೆ. ಆದಾಗ್ಯೂ, ಅವರು ತಮ್ಮ ವೇಗಕ್ಕೆ ಪ್ರತಿಫಲವನ್ನು ಪಡೆಯಲಿಲ್ಲ ತಮ್ಮ ನಾಲ್ಕು ಓವರ್‌ಗಳಲ್ಲಿ 52 ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.
ಯಾರಾದರೂ ಗಂಟೆಗೆ 150 ಕಿಮೀ ವೇಗದಲ್ಲಿ ಓಡಿ ಬೌಲ್ ಮಾಡುತ್ತಿದ್ದರೆ ನೋಡಲು ತುಂಬಾ ಖುಷಿಯಾಗುತ್ತದೆ. ನಿಮ್ಮಎಸೆತಗಳ ಗತಿಯನ್ನು ಹೀಗೆ ಬದಲಿಸಿ, ಈ ಮಾದರಿಯಲ್ಲಿ ಎಸೆತಗಳನ್ನು ಎಸೆಯಿರಿ ಎಂದು ನಾವು ಬೌಲರ್‌ ಗಳಿಗೆ ಹೇಳಿಕೊಡುತ್ತಿರುತ್ತೇವೆ. ಆದರೆ ಉಮ್ರಾನ್ ಗೆ ದೈವದತ್ತವಾಗಿ ಪ್ರಚಂಡ ವೇಗ ಸಿದ್ಧಿಸಿದೆ. ಅವನು ಎಸೆತಗಳನ್ನು ನೋಡುವುದೇ ಅದ್ಭುತವಾಗಿರುತ್ತದೆ. ನಾವು ಆತನ ಲೈನ್‌ ಅಂಡ್‌ ಲೆಂಗ್ತ್‌ ಬದಲಾಯಿಸಲು ಹಾಗೂ ಹೆಚ್ಚು ನಿರ್ಬಂಧಿಸಲು ಬಯಸುವುದಿಲ್ಲ ಎಂದು ಎಸ್‌ ಆರ್‌ ಹೆಚ್ ಬೌಲಿಂಗ್ ಕೋಚ್‌ ಡೆಲ್‌ ಸ್ಟೇಯ್ನ್ ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!