ಕೊಡಗಿನ ಮದೆನಾಡಿನಲ್ಲಿ ಮತ್ತೆ ಜಲಸ್ಫೋಟ: ಜನರಲ್ಲಿ ಆತಂಕ

ಹೊಸಿಗಂತ ಡಿಜಿಟಲ್‌ ಡೆಸ್ಕ್‌, ಮಡಿಕೇರಿ:
ಇಲ್ಲಿಗೆ ಸಮೀಪದ ಎರಡನೇ ಮೊಣ್ಣಂಗೇರಿಯಲ್ಲಿ ಭೂಕುಸಿತ ಸಂಭವಿಸಿರುವ ಬೆನ್ನಲ್ಲೇ ಇದೀಗ ಮದೆನಾಡು ಸಮೀಪ ಮತ್ತೊಂದು ಜಲಸ್ಫೋಟ ಸಂಭವಿಸಿದೆ.
ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆಹುಲ್ಲುಕಜೆ ಎಂಬಲ್ಲಿ ಶನಿವಾರ ಭಾರೀ ಶಬ್ಧದೊಂದಿಗೆ ಬೆಟ್ಟ ಕುಸಿದಿದೆ.
ಬೆಟ್ಟದ ಕೆಳಭಾಗದಲ್ಲಿ 15 ಕುಟುಂಬಗಳು ವಾಸವಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
2018ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲೇ ಮತ್ತೆ ಜಲ ಸ್ಫೋಟವಾಗಿದೆ.
ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ, ಬೆಟ್ಟ ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಮಳೆ ತೀವ್ರತೆ ಹೆಚ್ಚಾದಲ್ಲಿ ಮತ್ತಷ್ಟು‌ ಬೆಟ್ಟ ಕುಸಿಯುವ ಆತಂಕ ಎದುರಾಗಿದೆ.
ಬೆಟ್ಟ ಜರಿದಿರುವ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದ್ದು, ಮಂಜು ಮುಸುಕಿದ ವಾತಾವರಣ ವಿರುವುದರಿಂದ ಇದು ಎಲ್ಲಿಂದ ಬಿರುಕು ಬಿಟ್ಟಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮದೆನಾಡು ಗ್ರಾಮ ಲೆಕ್ಕಿಗ ರಮೇಶ್ ಮತ್ತಿತರರು ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!