ಅವಳಿ ನಗರದಲ್ಲಿ ನೀರಿನ ಕೊರತೆ: ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಜನ

ಹೊಸದಿಗಂತ ವರದಿ ಹುಬ್ಬಳ್ಳಿ:‌ 

ಅವಳಿನಗರದಲ್ಲಿ ಕಳೆದ 20 ದಿನದಿಂದ‌ ಸಮರ್ಪಕವಾಗಿ ನೀರು ಸರಬರಾಜು ಮಾಡದಿರುವುದನ್ನು ಖಂಡಿಸಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ ನೂರಾರು ಜನರು ಖಾಲಿ ಕೊಡಗಳ ಹಿಡಿದು ಪ್ರತಿಭಟನೆ ನಡೆಸಿದರು.

ನಗರದ ಇಂದಿರಾ ಗಾಜಿನ ಮನೆಯಿಂದ ಆರಂಭವಾದ ಪತ್ರಿಭಟನಾ ಪಾದಯಾತ್ರೆ ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ಸಮಾಪ್ತಿಯಾಗಿತು. ಪದಾಯಾತ್ರೆಯುದ್ದಕ್ಕೂ ಪ್ರತಿಭಟನಾಕಾರರು ಬೇಕೆ ಬೇಕೂ ನೀರು ಬೇಕು. ಧಿಕ್ಕಾರ ಧಿಕ್ಕಾರ ಎಲ್ ಆ್ಯಂಡ್ ಟಿ ಕಂಪನಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಕಳೆದ 15-20 ದಿನದಿಂದ‌ ಅವಳಿನಗರದಲ್ಲಿ ಸ‌ಮರ್ಪವಾಗಿ ನೀರು ಸರಬರಾಜು ಆಗಿಲ್ಲ. ವಾಡ್೯ಗಳಲ್ಲಿ ಜನರ ನೀರಿಗಾಗಿ ಪರದಾಡುವಂತಾಗಿದೆ ಎಂದರು.

ಮಾಜಿ‌ ಪಾಲಿಕೆ ಮೇಯರ್ ಪ್ರಕಾಶ್ ಕ್ಯಾರಕಟ್ಟಿ, ಪೀರಾಜಿ ಖಂಡೇಕರ್, ಹೂವಪ್ಪ ದಾಯಿಗೋಡಿ, ಆರೀಫ್ ಭದ್ರಾಪುರ, ಸಂದೀಲ ಕುಮಾರ, ಸಾದಿಕ್ ಯಕ್ಕುಂಡಿ, ಮಾದರ ಮಕಾಂದರ್, ಈಶ್ವರ ಪೂಜಾರಿ, ಗೋಪಾಲ್ ಯೆನ್ನಿಚುವಂಡಿ, ಲೋಕೇಶ ಬೊಮ್ಮನಾಳ್ ಇದ್ದರು. ನೂರಾರೂ ಮಹಿಳೆಯರು ಮಕ್ಕಳ ಮರಿ ಕರೆದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!