ಹೊಸ ದಿಗಂತ ವರದಿ ಯಾದಗಿರಿ:
ಕೃಷ್ಣಾ ಅಚ್ಚಕಟ್ಟು ಪ್ರದೇಶದ ರೈತರ ಹಾಗೂ ಸುರಪುರ ಶಾಸಕ ರಜುಗೌಡರ ಮನವಿಯ ಮೇರೆಗೆ ಮಾರ್ಚ 31 ರವರಿಗೆ ಕೃಷ್ಣಾ ಕಾಲುವೆಗಳಿಗೆ ಚಾಲು-ಬಂದ ಪದ್ದತಿಯಂತೆ ನೀರು ಹರಿಸಲು ತಿರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ 13 2020 ರಂದು ನಡೆದ ಐಸಿಸಿ ಸಭೆಯಲ್ಲಿ 01.12.2020 ರಿಂದ 21.03.2021 ರವರಿಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. 01.12.2020 ರಂದು ಆಲಿಮಟ್ಟಿ ಜಲಾಶಯದಲ್ಲಿ ಹೋದ ಸಾಲಿಗೆ ಹೋಲಿಸಿದಾಗ 2 ಜಲಾಶಯಗಳ ಸಂಗ್ರಹಣೆಯಲ್ಲಿ 7.37 ಟಿಎಂಸಿ ಕೊರತೆ ಇತ್ತು. ಈ ವರ್ಷ ಮಿತವ್ಯಯವನ್ನು ಸಾಧಿಸಿ 12.03.21 ರ ನಂತರ ಸರಾಸರಿ ಕೊರತೆಯನ್ನು 2.80 ಟಿಎಂಸಿಗೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವಿಧಾನ ಸಭೆ ಕಲಾಪಗಳು ಇರುವುದರಿಂದ ಹಾಗೂ ಕೋವಿಟ್-19 ಹಿನ್ನಲೆಯಲ್ಲಿ ಎರಡು ಜಾಲಶಯಗಳ ಮುಖ್ಯ ಇಂಜಿನೀಯರಗಳಿಂದ ವಿವರಗಳನ್ನು ಪಡೆಯಲಾಗಿದ್ದು, 12.03.21 ರಂದು 2 ಜಲಾಶಯಗಳ ಜೀವ ಜಲವು 40.04 ಟಿಎಂಸಿ ಇದ್ದು, ಬಾಕಿ ಉಳಿದಿರುವ ನೀರಾವರಿ ದಿನಗಳಿಗೆ ಹಾಗೂ 31.03.2021 ರವರಿಗೆ ಅಗತ್ಯ ಬಳೆಕೆಗೆ 24.105 ಟಿಎಂಸಿ ನೀರಿನ ಅವಶ್ಯಕತೆ ಇರುವುದು.
15.835 ಟಿಎಂಸಿ ನೀರಿನ ಸಂಗ್ರಹಣೆ ಇರುವುದರಿಂದ ಕೃಣಾ ಮೇಲ್ದಂಡೆ ಯೋಜನೆಯ ಕಾಲುವೆ ಜಾಲಗಳಿಗೆ ಮಾ.21 ರ ಬದಲಿಗೆ ಮಾ.31 ರತನಕ 10 ದಿನಗಳ ಕಾಲ ಹಿಂಗಾರು ಹಂಗಾಮಿನ ನೀರಾವರಿ ಅವಧಿಯನ್ನು ವಿಸ್ತರಿಸಲು 12 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಏ. 1 ರಿಂದ ಕ್ಲೋಜರ ಕಾಮಗಾರಿಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿ 15.06.2021 ರೊಳಗೆ ಮುಖ್ಯ ಸ್ಥಾವರ, ಗೇಟುಗಳ ಹಾಗೂ ಕಲುವೆಗಳ ಜಾಲಗಳನ್ನು ಸಂರಕ್ಷಿಸಲು ಮತ್ತು ಅಗತ್ಯ ಕಾಮಗಾರಿಗಳು ಕೈಗೆತ್ತಿಕೊಂಡು ಪೂರ್ಣಗೊಳಿಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮನವಿಗೆ ಸ್ಪಂಧಿಸಿದ ಸಿಎಂ :
ಕೃಷ್ಣಾ ಅಚುಕಟ್ಟು ಪ್ರದೇಶದ ರೈತರ ಹಿತಾಶಕ್ತ ಕಪಾಡುವಂತೆ ಹಾಗೂ ಮಾ.31 ರವರಿಗೆ ಕಲುವೆಗೆ ನೀರು ಹರಿಸಲು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಲಾಗಿತು. ಅದರಂತೆ ನಮ್ಮ ಮನವಿಗೆ ಸ್ಪಂAಧಿಸಿ ನೀರು ಹರಿಸಲು ಕ್ರಮ ಜರಗಿಸಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡರು ತಿಳಿಸಿದ್ದಾರೆ.
ಭತ್ತು ಕಟಾವಿಗೆ ಬಂದಿದ್ದು ನೀರಿನ ಅವಶ್ಯಕತೆ ಇತ್ತು. ಮಾ. 31 ರವರಿಗೆ ನೀರು ಹರಿಸಲಾಗುತ್ತಿದ್ದು, ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.