ಮದುವೆಗೆ ಬನ್ನಿ…ಸೇನೆಗೆ ಮದುವೆ ಆಮಂತ್ರಣ ನೀಡಿ ನೆಟ್ಟಿಗರ ಮನಗೆದ್ದಿತು ಈ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಮೂಲದ ಜೋಡಿ ಇತ್ತೀಚೆಗೆ ಭಾರತೀಯ ಸೇನೆಯ ಸೈನಿಕರನ್ನು ತಮ್ಮ ಮದುವೆಗೆ ಆಹ್ವಾನಿಸುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಆಮಂತ್ರಣದ ಒಂದು ಭಾಗದಲ್ಲಿ ನೂತನ ಜೋಡಿ, ನಿಮ್ಮಿಂದಾಗಿ ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ ಎಂದು ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಈ ಮದುವೆಯ ಆಮಂತ್ರಣದ ಚಿತ್ರ ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿದ್ದು, ಟ್ವಿಟರ್ ಬಳಕೆದಾರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಆಮಂತ್ರಣದ ಜತೆಗೆ ದಂಪತಿಗೆ ಶುಭಾಶಯ ಕೋರಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!