spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಂದಗಿ ಮತಕ್ಷೇತ್ರ ಜೆಡಿಎಸ್ ಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ: ಎಚ್.ಡಿ. ದೇವೇಗೌಡ

- Advertisement -Nitte

ಹೊಸದಿಗಂತ ವರದಿ, ವಿಜಯಪುರ:

ಸಿಂದಗಿ ಮತಕ್ಷೇತ್ರ ಜೆಡಿಎಸ್ ಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಸಹಪಾಠಿ ನನ್ನ ಜೊತೆಯಲ್ಲಿ ಇದ್ದು, ಕ್ಷೇತ್ರದ ಬೆಳವಣಿಗೆಗೆ ಹಲವಾರು ಯೋಜನೆಗಳು ಮಾಡಿದ್ದ ದಿವಂಗತ ಎಂ.ಸಿ. ಮನಗೂಳಿ ಅವರು, ಇಂದು ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆಯ ಬಳಿಕ ಈ ಚುನಾವಣೆ ನಡೆಯುತ್ತಿದೆ ಎಂದರು.
ಉಪ ಚುನಾವಣೆಯ ಕುರಿತು ನಾನು, ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರು ಎರಡು ದಿನ ಚರ್ಚಿಸಿ ಅಭ್ಯರ್ಥಿ ಹಾಕಲು ನಿರ್ಣಯಿಸಿ, ನಾಜಿಯಾ ಶಕೀಲ್ ಅಂಗಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಯಿತು ಎಂದರು.
ಇದು ಜೀವನದ ಕೊನೆಯ ಘಟ್ಟ, ಈ ಚುನಾವಣೆಯನ್ನು ದೃಢವಾಗಿ ನಿಮ್ಮೆಲ್ಲರ ಸಹಕಾರದಿಂದ ಹೋರಾಟ ಮಾಡಲು ನಿರ್ಣಯ ಮಾಡಿರುವೆ. ಬರೀ ಸಾರ್ವಜನಿಕರ ಸಭೆ ಮಾಡದೇ ಹಳ್ಳಿಗಳಿಗೂ ಹೋಗಿ ಮತಯಾಚನೆ ಮಾಡಬೇಕಿದೆ. ನಾನು ರಾಜಕೀಯ ಜೀವನದ ಕೊನೆಯ ಘಟದಲ್ಲಿದ್ದೇನೆ. ಜನರು ನಮಗೆ ಮತ ಹಾಕಿ ಸಹಾಯ ಮಾಡಬೇಕು ಎಂದರು.
ಕುಮಾರಸ್ವಾಮಿ ಅವರು ಕೂಡ ಬಂದು ಈ ಭಾಗದಲ್ಲಿ ಮತಯಾಚನೆ ಮಾಡುತ್ತಾರೆ. ಶಕ್ತಿ ಮೀರಿ ನಾವು ನಮ್ಮ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನ ಮಾಡುತ್ತೇವೆ ಎಂದರು.
ಒಂದು ಉಪ ಚುನಾವಣೆಯಿಂದ ಒಂದು ರಾಜಕೀಯ ಪಕ್ಷದ ಅಸ್ತಿತ್ವ ನಿರ್ಣಯ ಮಾಡಲು ಆಗಲ್ಲ. 2023 ರ ಚುನಾವಣೆ ಈ ಚುನಾವಣೆಯ ಫಲಿತಾಂಶ ಸಂಬಂಧ ಇಲ್ಲ. ಜೆಡಿಎಸ್ ಪಕ್ಷವನ್ನು ಮುಗಿಸಲೇ ಬೇಕು ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ ಪಟ್ಟಿವೆ ಎಂದು ದೂರಿದರು.
ಜೆಡಿಎಸ್ ರಾಷ್ಟ್ರೀಯ ಮುಖಂಡ ಜಫ್ರುಲ್ಲಾ ಖಾನ್, ಸಿಂದಗಿ ಉಪ ಚುನಾವಣೆ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ, ಬಂಡೆಪ್ಪ ಕಾಶಂಪುರ, ಶಾಸಕ ದೇವಾನಂದ ಚವ್ಹಾಣ, ಮಲ್ಲಿಕಾರ್ಜುನ ಯಂಡಿಗೇರಿ, ಸುನೀತ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss