Tuesday, August 16, 2022

Latest Posts

“ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡೊದಿಲ್ಲ, ನಮ್ಮ ಪಕ್ಷದ ಅಭಿವೃದ್ಧಿ ಮಾತ್ರ ಮುಖ್ಯ”

ಹೊಸದಿಗಂತ ವರದಿ, ವಿಜಯಪುರ:

ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆ ಇಲ್ಲ, ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ, ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್ ಮುಗಿಸುತ್ತವೆ ಎಂದು ದೇವೇಗೌಡರ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿ, ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡೊದಿಲ್ಲ ಎಂದರು.
ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ ಎಂದು ಜಮೀರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ವಿಪರೀತ ಕಲ್ಪನೆ ಅಷ್ಟೆ, ಅದಕ್ಕೆ ಯಾವುದು ಆಧಾರವಿಲ್ಲ ಎಂದರು.
ವಿಧಾನಸೌಧಕ್ಕೆ ಬೀಗ ಜಡಿದು ಪ್ರಚಾರಕ್ಕೆ ಬಂದ ಸಚಿವರು ಎಂದು ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಥರ ಏನಿಲ್ಲಾ, ಎರಡೆರಡು ಮೂರು ಮೂರು ದಿನ ನಮ್ಮ ಸಚಿವರು ಬಂದುಹೋಗಿ ಮಾಡ್ತಿದ್ದಾರೆ. ಯಾವುದೇ ಸರ್ಕಾರಿ ಕೆಲಸಗಳು ನಿಂತಿಲ್ಲ ಎಂದರು.
ಅವರು ಹಿಂದೆ ಏನೇಲ್ಲಾ ಮಾಡಿದಾರೆ ಎಂಬುದು ನಮಗೂ ಗೊತ್ತಿದೆ. ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ, ಯಾವುದೇ ಕೆಲಸಗಳನ್ನು ನಿಂತಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss