ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ವಿವಾದದ ಚರ್ಚೆಯನ್ನು ನಿಲ್ಲಿಸದಿದ್ದರೆ, ರಕ್ತಕ್ರಾಂತಿ ಆಗೋದು ಖಂಡಿತ. ಜನರಿಗೆ ತೊಂದರೆ ಕೊಡಬೇಡಿ. ಭವಿಷ್ಯದಲ್ಲಿ ಕರ್ನಾಟಕದಲ್ಲಿ ಏನಾಗುತ್ತೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸ್ತಬ್ಧವಾಗಿದೆ. ಜನರನ್ನು ಬೇರೆಡೆಗೆ ಕರೆದೊಯ್ಯಲಾಗುತ್ತಿದೆ. ಈ ಹಿಂದೆ ಸಿದ್ಧರಾಮಯ್ಯ ಆಡಳಿತವನ್ನು ನೋಡಿದ್ದೇನೆ. ಆದರೆ ಈಗಿನ ಸರಕಾರ ಕಳೆದ ಒಂದೂವರೆ ವರ್ಷದಲ್ಲಿ ಮಾಡಿರುವ ಪ್ರಗತಿ ಏನು? ಸಿದ್ದರಾಮಯ್ಯ ಪಂಜರದ ಗಿಳಿ. ಕಾರ್ಯದರ್ಶಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಹೇಗೆ ಆದೇಶಿಸುತ್ತಾರೆ? ಎಲ್ಲಕ್ಕಿಂತ ಸತ್ಯಗಳಿಗೆ ಆದ್ಯತೆ ನೀಡಿ ಎಂದು ಕಿಡಿಕಾರಿದ್ದಾರೆ.