ಗೆಲುವಿಗಾಗಿ ಹೋರಾಡುತ್ತೇವೆ: ಹೊಸ ವರ್ಷದ ಸಂದೇಶದಲ್ಲಿ ಝೆಲೆನ್ಸ್ಕಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ವಿರುದ್ಧದ ಯುದ್ಧದಲ್ಲಿ ತಾವು ಗೆಲ್ಲುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಹೊಸ ವರ್ಷದ ಸಂದೇಶದಲ್ಲಿ ಉಕ್ರೇನ್ ಜನರನ್ನು ಉದ್ದೇಶಿಸಿ ಮಾತನಾಡಿದರು.

ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಜನತೆಗೆ ಝೆಲೆನ್ಸ್ಕಿ ಸಂದೇಶ ನೀಡಿದ್ದಾರೆ. “ನಾವು ಬಹಳ ಸಮಯದಿಂದ ಹೋರಾಡಿದ್ದೇವೆ ಹೋರಾಡುತ್ತಿದ್ದೇವೆ ಹಾಗೆಯೇ ಹೋರಾಟ ಮುಂದುವರಿಸುತ್ತೇವೆ. ಗೆಲುವು ನಮ್ಮದಾಗುವವರೆಗೂ ಹೋರಾಟ ನಡೆಸುತ್ತೇವೆ ಎಂದರು. ನಾವು ಏನು ಮಾಡಿದ್ದೇವೆ… ಏನು ಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳಿ. ಯುದ್ಧದ ಮೊದಲ ದಿನದಿಂದಲೂ ನಮ್ಮ ಸೈನಿಕರು ಹೇಗಿದ್ದಾರೆ ಎಂದು ನೋಡಿ. ನಮ್ಮ ಸೈನಿಕರು ದೇಶವನ್ನು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಶಕ್ತಿಯೊಂದಿಗೆ ಉಳಿಸಿಕೊಂಡಿದ್ದಾರೆ.

ಉಕ್ರೇನ್‌ನಲ್ಲಿರುವ ಎಲ್ಲರಿಗೂ ಝಲೆನ್ಸ್ಕಿ ಧನ್ಯವಾದಗಳನ್ನು ತಿಳಿಸಿದರು. ಮತ್ತೊಂದೆಡೆ ಶನಿವಾರ, ರಷ್ಯಾ 20 ಕ್ಷಿಪಣಿಗಳನ್ನು ಉಡಾಯಿಸಿದೆ. ಉಕ್ರೇನ್ ಅವುಗಳಲ್ಲಿ 12 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!