ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಹಾವೇರಿ:
ಸಿ.ಎಂ.ಉದಾಸಿ ಅವರನ್ನು ಕಳೆದುಕೊಂಡ ನಾವೆಲ್ಲ ಇಂದು ಅನಾಥರಾಗಿದ್ದೇವೆ, ಓರ್ವ ತಂದೆ ಹಾಗೂ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಜಿಲ್ಲೆಯ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ.ಉದಾಸಿ ಅವರು ಓರ್ವ ದಿಟ್ಟ ಹೋರಾಟಗಾರರು, ಹಾನಗಲ್ಲ ತಾಲೂಕಿನ ಜಿದ್ದಾ ಜಿದ್ದಿ ರಾಜಕಾರಣದಲ್ಲಿ ಎಂದಿಗೂ ಸಹ ಅವರು ವಯಕ್ತಿಯ ದ್ವೇಶವನ್ನು ಮಾಡಿದವರಲ್ಲ, ಸಜ್ಜನ, ಮುತ್ಸದ್ದಿ, ಸದಾ ಕಾಲ ಜನರ ಬಗ್ಗೆ ಚಿಂತನೆ ಮಾಡುವಂತವರಾಗಿದ್ದರು. ವಿಶೇಷವಾಗಿ ರೈತರ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದರಿಂದ ಬೆಳೆ ಜಿಲ್ಲೆಗೆ ಅತ್ಯಧಿಕ ಪ್ರಮಾಣದಲ್ಲಿ ಬರುವುದಕ್ಕೆ ಸಾಧ್ಯವಾಯಿತು ಎಂದರು.
ವಿಮೆ ಕುರಿತು ಇಡೀ ಕರ್ನಾಟದಲ್ಲಿ ಸಂಪೂರ್ಣ ಮಾಹಿತಿ ಇದ್ದಿದ್ದರೆ ಅದು ಉದಾಸಿಯವರು ಮಾತ್ರ ಎಂದರೆ ತಪ್ಪಾಗಲಾರದು. ಹಾವೇರಿ ಜಿಲ್ಲೆಗೆ ಅಧಿಕ ಪ್ರಮಾಣದಲ್ಲಿ ಬೆಳೆ ವಿಮೆಯನ್ನು ತಂದಿದ್ದರು. ಹಾವೇರಿ ಪ್ರತ್ಯೇಕ ಜಿಲ್ಲೆಯಾಗುವುದರಲ್ಲಿ ಅವರ ಪಾತ್ರ ಬಹಳವಾಗಿತ್ತು. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ ಪ್ರಾರಂಭಿಸಬೇಕೆನ್ನುವ ಅವರ ಕನಸು ಈಗ ಸಾಕಾರಗೊಳ್ಳುವತ್ತ ಸಾಗುತ್ತಿದೆ.
ಅವರು ಇರಬೇಕಾಗಿತ್ತು, ಅವರ ಮಾರ್ಗದರ್ಶನ ಇನ್ನು ಬೇಕಾಗಿತ್ತು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯುತ್ತೇವೆ ಅವರ ಆದರ್ಶಗಳನ್ನು ಪರಿಪಾಲನೆ ಮಾಡುತ್ತೇವೆ, ವಯಸ್ಸಿಗೂ ಮೀರಿ ಅವರ ದುಡುಮೆ ನಮಗೆಲ್ಲ ಸ್ಪೂರ್ಥಿದಾಯಕವಾದುದು. ಅವರ ಆತ್ಮಕ್ಕೆ ಶಾಂತಿ ಸಿಗುವುದರೊಂದಿಗೆ ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಇತರರಿದ್ದರು.