Monday, August 8, 2022

Latest Posts

ನಮಗೆ ಮಹಿಳೆಯರ ಬಗ್ಗೆ ಹೆಚ್ಚಿನ ಗೌರವವಿದೆ: ಸುಪ್ರೀಂ ಕೋರ್ಟ್ ಸಿಜೆಐ

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಮಗೆ ಮಹಿಳೆಯರ ಬಗ್ಗೆ ಹೆಚ್ಚಿನ ಗೌರವವಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ಅವರು ಹೇಳಿದ್ದಾರೆ.
14 ವರ್ಷದ ಗರ್ಭಿಣಿ ಸಂತ್ರಸ್ಥೆಯ ಅರ್ಜಿ ವಿಚಾರಣೆ ಅರ್ಜಿ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ವಿ ರಾಮಸುಬ್ರಹ್ಮಣಿಯನ್ನು ಅವರನ್ನೊಳಗೊಂಡ ಪೀಠ ಈ ಹೇಳಿಕೆ ನೀಡಿದೆ.
ಸರ್ಕಾರಿ ನೌಕರರೊಬ್ಬರು ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದರು. ಬಳಿಕ ಮದುವೆಗೆ ನಿರಾಕರಿಸಿದ್ದರು. ಈ ಸಂಬಂಧ ಮಾರ್ಚ್ 1 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್.ಬೋಪಣ್ಣ ನೇತೃತ್ವದ ನ್ಯಾಯಪೀಠವು , ಮದುವೆಯಾಗಲು ಬಯಸಿದರೆ ನ್ಯಾಯಾಲಯ ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಸೆರೆವಾಸ ಅನುಭವಿಸಬೇಕಾಗುತ್ತದೆ. ನೀವು ಅವಳನ್ನು ಮದುವೆಯಾಗುತ್ತೀರಾ? ಎಂದು ಆರೋಪಿಗೆ ಸಿಜೆಐ ಕೇಳಿದ್ದರು.
ರಾಜ್ಯ ಸರ್ಕಾರಗಳಿಗೆ ನೋಟಿಸ್ಆದರೆ ಮಾಧ್ಯಮಗಳು, ನ್ಯಾಯಾಲಯವು ಅತ್ಯಾಚಾರಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದೆ ಎಂದು ವ್ಯಾಖ್ಯಾನಿಸಿ ವರದಿ ಮಾಡಿದ್ದವು. ಇದರಿಂದ ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನ್ಯಾ. ಎಸ್ ಎ ಬೊಬ್ಡೆ ಅವರು , ನ್ಯಾಯಾಲಯವು ಯಾವಾಗಲೂ ಮಹಿಳೆಯರಿಗೆ ಗೌರವ, ಆದ್ಯತೆ ನೀಡಿ ತೀರ್ಮಾನ ತೆಗೆದುಕೊಳ್ಳುತ್ತದೆ. ಇದಕ್ಕೆ ಹಲವು ದೇವದಾಸಿ ಪ್ರಕರಣಗಳೇ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss