ಈ ಆಟಗಾರನನ್ನು ಖರೀದಿಸೋಕೆ ನಮ್ಮ ಹತ್ರ ದುಡ್ಡಿಲ್ಲ, ಮ್ಯಾಕ್ಸ್‌ವೆಲ್ ಹೀಗೆ ಹೇಳಿದ್ದು ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಟೂರ್ನಿಯಲ್ಲಿ ಈ ಆಟಗಾರನ ಆಟ ನೋಡಿದಮೇಲೆ ಇವರನ್ನು ಖರೀದಿಸಲು ನಮ್ಮ ಫ್ರಾಂಚೈಸಿಗಳ ಬಳಿ ಇರೋ ದುಡ್ಡು ಸಾಕಾಗೋದಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಈ ಆಟಗಾರ ಬೇರೆ ಯಾರೂ ಅಲ್ಲ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್. ಸೂರ್ಯಕುಮಾರ್‌ರನ್ನು ಖರೀದಿಸೋಕೆ ನಮ್ಮ ಬಳಿ ಇರುವ ದುಡ್ಡು ಸಾಕಾಗೋದಿಲ್ಲ. ಆತನನ್ನು ಖರೀದಿಸಲು ತಂಡದ ಎಲ್ಲಾ ಆಟಗಾರರನ್ನು ಕೈಬಿಡಬೇಕಾಗುತ್ತದೆ ಎಂದು ಗ್ಲೆನ್ ಹೇಳಿದ್ದಾರೆ.

ಈ ವರ್ಷ ಸೂರ್ಯಕುಮಾರ್ ಯಾದವ್‌ಗೆ ಸ್ಟಾರ್ ವರ್ಷ ಎಂದೇ ಹೇಳಬಹುದು. ಸೂರ್ಯಕುಮಾರ್ ಈಗಾಗಲೇ ಟಿ20 ಕಿಂಗ್ ಆಗಿದ್ದಾರೆ. ಬೌಲರ್‌ಗಳ ನಿದ್ದೆಗೆಡಿಸಿರುವ ಸೂರ್ಯರ ಬ್ಯಾಟಿಂಗ್ ಟ್ಯಾಕಲ್ ಮಾಡೋದು ಕಷ್ಟವಾಗಿದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಖತರ್‌ನಾಕ್ ಬೌಲರ್‌ಗಳ ಚೆಂಡಿಗೂ ಹೆದರದ ಸೂರ್ಯ ಸಿಕ್ಸರ್‌ಗಳ ಸುರಿಮಳೆ ಸುರಿಸಿದ್ದಾರೆ. ಈಗಾಗಲೇ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡದ ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!