Thursday, August 11, 2022

Latest Posts

ನಮಗೆ ಲಸಿಕೆಯ ಅಗತ್ಯವಿದೆ, ಬೇಗ ಪೂರೈಸಿ: ಸೀರಮ್ ಸಿಇಒಗೆ ಪತ್ರ ಬರೆದ ಪುಣೆ ಮೇಯರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಮಗೆ ಲಸಿಕೆಯ ಅಗತ್ಯವಿದೆ,25 ಲಕ್ಷ ರೂ.ಗಳ ಲಸಿಕೆಯನ್ನು ಪೂರೈಸಿ ಎಂದು ಪುಣೆ ಮೇಯರ್​ ಸೀರಮ್ ಇನ್‌ಸ್ಟಿಟ್ಯೂಟ್​ನ ಸಿಇಒಗೆ ಪತ್ರ ಮುಖೇನ ಕೋರಿದ್ದಾರೆ.
‘ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುತ್ತೇವೆ, ಆದರೆ ನೀವು ಈಗಿನಿಂದಲೇ ನಮಗೆ 25 ಲಕ್ಷ ಲಸಿಕೆಗಳನ್ನು ನೀಡಿ ಎಂದು ಮೇಯರ್ ಮುರಳೀಧರ್ ಮೊಹೋಲ್ ಹೇಳಿದ್ದಾರೆ.
ಪುಣೆಯಲ್ಲಿ ಲಸಿಕೆಗಳ ಕೊರತೆಯಿಂದಾಗಿ, ಮಹಾನಗರ ಪಾಲಿಕೆಗೆ ಸೂಕ್ತ ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಲಸಿಕೆಯನ್ನು ಸ್ವತಃ ಖರೀದಿಸಲು ನಿಗಮ ನಿರ್ಧರಿಸಿದೆ. ಈ ಕುರಿತು ಸೀರಮ್ ಸಂಸ್ಥೆಯೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss