Thursday, August 18, 2022

Latest Posts

ಓದುಗರನ್ನು ಹೆಚ್ಚೆಚ್ಚು ಕಾಡುವ ಸಾಹಿತ್ಯ ಹೊರಹೊಮ್ಮಬೇಕು: ಕೆಎಎಸ್ ಅಧಿಕಾರಿ ವಸುಂಧರಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮಂಡ್ಯ:

ಓದುಗರನ್ನು ಹೆಚ್ಚೆಚ್ಚು ಕಾಡುವಂತಹ ಸಾಹಿತ್ಯ ಹೊರ ಹೊಮ್ಮಬೇಕಿದೆ ಎಂದು ಕೆ.ಎ.ಎಸ್. ಅಧಿಕಾರಿ ಕೆ.ಎಂ. ವಸುಂಧರಾ ಅಭಿಪ್ರಾಯಿಸಿದರು.
ಐಡಿಯಲ್ ಪ್ರಕಾಶನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕೆ.ವಿ. ಶಂಕರಗೌಡರ ಶತಮಾನೋತ್ಸವ ಭವನದಲ್ಲಿ ನಡೆದ ಶುಭಶ್ರೀ ಪ್ರಸಾದ್ ಅವರ ಒಳಮನ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಯಾವುದೇ ಸಾಹಿತ್ಯ ಅಥವಾ ಕೃತಿಗಳು ಓದುಗರನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುವಂತಹ ಸಾಹಿತ್ಯಗಳು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶುಭಶ್ರೀ ಅವರು ಹೊರ ತಂದಿರುವ ಒಳಮನ ಕೃತಿಯಲ್ಲಿ ಹಲವು ಬರಹಗಳಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವಂತಹ ಶಕ್ತಿ ಇದೆ ಎಂದು ಬಣ್ಣಿಸಿದರು.
ಶುಭಶ್ರೀ ಅವರು ತಮ್ಮ ಕೃತಿಯಲ್ಲಿ ಸಾಮಾಜಿಕ ಕಾಳಜಿ ಇರುವಂತಹ ಬರಹಗಳನ್ನು ರಚಿಸಿದ್ದಾರೆ. ಇದು ಸಮಾಜದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಿದರು.
ಕೃತಿ ಕುರಿತು ಸಾಹಿತಿ ಡಾ. ನೀ.ಗೂ. ರಮೇಶ್ ಮಾತನಾಡಿ, ಶುಭಶ್ರೀಯವರು ತಮ್ಮ ಕೃತಿಯಲ್ಲಿ ಸಾವಧಾನದ ಬೆನ್ನೇರಿ ಒಳಮನಸ್ಸನ್ನು ತುಂಬಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕುವೆಂಪುರುರು ಹೇಳಿರುವಂತೆ ಯಾರೂ ಮುಖ್ಯರಲ್ಲಘಿ, ಯಾರೂ ಅಮುಖ್ಯರಲ್ಲಘಿ, ಅವಸರವೂ ಕೂಡ ಸಾವಧಾನದ ಬೆನ್ನೇರಿದೆ. ಇದು ಶುಭಶ್ರೀಯವರ ಸಾಹಿತ್ಯ, ಅವರು ತೊಡಗಿಸಿಕೊಂಡಿರುವ ಬ್ಯಾಂಕಿಂಗ್ ಕ್ಷೇತ್ರ. ಇಂತಹ ಸನ್ನಿವೇಶದಲ್ಲಿ ಒತ್ತಡದಲ್ಲಿ, ಅವಸರವಿದ್ದರೂ ಸಾವಧಾನದ ಬೆನ್ನೇರಿ ತಮ್ಮ ಒಳಮನಸ್ಸನ್ನು ಸಾವಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಬಣ್ಣಿಸಿದರು.
ಉದ್ಯೋಗ, ಕುಟುಂಬದೊಳಗಿನ ಸಂಗತಿ, ಅವರ ಮನೆಯ ಬೀದಿಯಲ್ಲಿನ ಮಕ್ಕಳು ಆಡುವಂತಹ ಚಟುವಟಿಕೆ, ಸ್ನೇಹಿತರೊಳಗಿನ ದುಃಖ-ದುಮ್ಮಾನಗಳು ಅವರನ್ನು ಚಿಂತನೆಗಚ್ಚುವ ಪ್ರಸಂಗಗಳಾಗಿವೆ. ಅವೆಲ್ಲವನ್ನೂ ಆಸ್ವಾದಿಸಿ, ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಅಭಿವ್ಯಕ್ತಿಸುವ ಪ್ರಯತ್ನ ಮಾಡಿದ್ದಾರೆ. ಇದು ಒಡನಾಟ, ಸಿಟ್ಟು, ಬೈಗುಳ ಬೇರೆ ಬೇರೆ ಆಯಾಮಗಳನ್ನು ಎಲ್ಲರಿಗೂ ಸೃಷ್ಠಿಯಾದರೆ, ಲೇಖಕಿಗೆ ಬರವಣೆಗೆಗೆ ವಸ್ತುವಾಗಿವೆ. ಅದನ್ನು ನವಿರಾದ ಸಾಹಿತ್ಯದಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!