ನಮ್ಮದು ದೇಶಕ್ಕಾಗಿ ಕೆಲಸ ಮಾಡಲು ಆದ್ಯತೆ, ಒಂದು ಕುಟುಂಬದ ಪರ ಅಲ್ಲ: ರಾಹುಲ್ ಗಾಂಧಿಗೆ ಚಾಟಿ ಬೀಸಿದ ಅನಿಲ್‌ ಆಂಟನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ಟ್ವೀಟ್‌ ಯೊಂದು ಮಾಡಿದ್ದೂ ಎಲ್ಲಡೆ ವೈರಲ್ ಆಗಿದೆ. ಅದ್ರಲ್ಲಿ ಅದಾನಿ ಹೆಸರಿನಲ್ಲಿರುವ ಅಕ್ಷರಗಳನ್ನು ಬಳಸಿಕೊಂಡು, ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌, ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್‌ ಕುಮಾರ್‌ ರೆಡ್ಡಿ, ಹಿಮಾಂತ ಬಿಸ್ವಾ ಶರ್ಮ ಹಾಗೂ ಅನಿಲ್‌ ಆಂಟನಿ ಅವರನ್ನು ಟ್ರೋಲ್‌ ಮಾಡಿದ್ದಾರೆ .

ಇದೀಗ ಈ ಟ್ವೀಟ್ ಗೆ ತಿರುಗೇಟು ಕೊಟ್ಟ ಮಾಜಿ ರಕ್ಷಣಾ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್‌ ಆಂಟನಿ , ಶ್ರೀ ರಾಹುಲ್‌ ಗಾಂಧಿಯವರೇ ಒಂದು ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಈ ರೀತಿಯಲ್ಲಿ ನೋಡುತ್ತಿರುವುದು ಬಹಳ ಬೇಸರ ಎನಿಸುತ್ತಿದೆ. ನೀವೀಗ ಆನ್‌ಲೈನ್‌/ಸೋಶಿಯಲ್‌ ಮೀಡಿಯಾ ಕೇಂದ್ರದ ಟ್ರೋಲ್‌ ಟೀಮ್‌ನಂತೆ ವರ್ತಿಸುತ್ತಿದ್ದೀರಿ. ರಾಷ್ಟ್ರೀಯ ನಾಯಕನ ವರ್ತನೆ ಇದಲ್ಲ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ನಾಯಕರುಗಳೊಂದಿಗೆ ನನ್ನ ಹೆಸರನ್ನೂ ನೋಡಲು ಬಹಳ ಖುಷಿಯಾಗುತ್ತದೆ. ಇವರೆಲ್ಲರೂ ಕೂಡ ಒಂದು ಕುಟುಂಬದ ಬದಲು, ಭಾರತ ಎನ್ನುವ ದೇಶಕ್ಕಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಪಕ್ಷ ತೊರೆಯಬೇಕಾಯಿತು’ ಎಂದು ರಾಹುಲ್‌ ಗಾಂಧಿಗೆ ಖಡಕ್ ಆಗಿ ಚಾಟಿ ಬೀಸಿದ್ದಾರೆ .

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!