ನಾವು ಉತ್ತಮ ಶ್ರೀಲಂಕಾವನ್ನು ಬಯಸುತ್ತೇವೆ, ಮಳೆಯಲ್ಲಿ ಮಕ್ಕಳ ಪ್ರತಿಭಟನೆ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಜನತೆ ತತ್ತರಿಸಿದ್ದಾರೆ. ದಿನದಿಂದ ದಿನಕ್ಕೆ ಅಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಮೂಲಭೂತ ಸೌಕರ್ಯಗಳು ಸೇರಿದಂತೆ ಇತರೆ ವಸ್ತುಗಳ ಅಭಾವ ಉಂಟಾಗಿದೆ. ಗಗನಕ್ಕೇರಿರುವ ಬೆಲೆ, ಲಭ್ಯವಿರದ ಆಹಾರ ಸಾಮಗ್ರಗಳು ಇದೆಲ್ಲದರಿಂದ ರೋಸಿ ಹೋದ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಸುರಿಯುತ್ತಿರುವ ಭಾರೀ ಮಳೆಯ ನಡುವೆಯೂ ಶ್ರೀಲಂಕಾದ ಕೊಲಂಬೊದಲ್ಲಿರುವ ಗಾಲ್ ಫೇಸ್ ಗ್ರೀನ್ ಅರ್ಬನ್ ಪಾರ್ಕ್‌ನಲ್ಲಿ ಪುಟ್ಟ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ. ʻನಾವು ಉತ್ತಮ ಶ್ರೀಲಂಕಾವನ್ನು ಬಯಸುತ್ತೇವೆʼ. ಎಂಬ ಘೋಷಣೆಗಳೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.‌

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!