spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಮುಟ್ಟಿನ ಮೂರು ದಿನ ಶಾಲೆಗೆ ರಜೆ ಬೇಕು’

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………


ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪಿರಿಯಡ್ಸ್‌ನ ಮೊದಲ ಮೂರು ದಿನ ಏನೂ ಕೆಲಸ ಮಾಡದಂತೆ ಮನೆಯಲ್ಲೇ ಕೂರಿಸುವ ಪದ್ಧತಿ ಇತ್ತು. ಇದು ಪದ್ಧತಿಯಾಗಿದ್ದರೂ ಇದಕ್ಕೆ ಆರೋಗ್ಯ ಸಂಬಂಧಿ ಕಾರಣವೂ ಇದೆ.
ಪಿರಿಯಡ್ಸ್ ಸಮಯದಲ್ಲಿದ ರಕ್ತಸ್ರಾವದಿಂದ ಸುಸ್ತು,ಹೊಟ್ಟೆನೋವು, ಬೆನ್ನುನೋವು ಇತ್ಯಾದಿ ಸಮಸ್ಯೆ ಬಾಧಿಸುತ್ತದೆ. ಆದರೂ ಈಗಿನ ಹೆಣ್ಣುಮಕ್ಕಳು ಆ ದಿನಗಳಲ್ಲಿಯೂ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.
ಆದರೆ ಕಚೇರಿಯಲ್ಲಿ ಸರಿಯಾದ ಬಾತ್‌ರೂಂ ವ್ಯವಸ್ಥೆ ಇಲ್ಲದಿದ್ದರೆ ಹೇಗೆ?

ಉತ್ತರ ಪ್ರದೇಶದಲ್ಲಿ ಮಹಿಳಾ ಶಿಕ್ಷಕರ ಸಂಘವೊಂದು ಮುಟ್ಟಿನ ಮೂರು ದಿನಗಳ ರಜೆ ಕೋರಿದೆ.
ಮಹಿಳಾ ಶಿಕ್ಷಕರ ಸಂಘವು ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯದ ಕಳಪೆ ಸ್ಥಿತಿ ಬಗ್ಗೆ ಧ್ವನಿಯೆತ್ತಿದೆ. ಈ ರೀತಿ ಶೌಚಾಲಯ ಬಳಸುವುದು ಮುಟ್ಟಿನ ದಿನಗಳಲ್ಲಿ ಅಸಾಧ್ಯ. ಆದ್ದರಿಂದ ಮೂರು ದಿನ ರಜೆ ನೀಡಿ ಎಂದು ಆಗ್ರಹಿಸಿ ಅಭಿಯಾನ ಆರಂಭಿಸಿದೆ.

ಈ ಸಂಘ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ.
ಈ ಬಗ್ಗೆ ಶಿಕ್ಷಕರ ಸಂಘದ ಅಧ್ಯಕ್ಷೆ ಸುಲೋಚನಾ ಮೌರ್ಯ ಮಾತನಾಡಿದ್ದು, ತಮ್ಮ ಸಂಟಕ ವ್ಯಕ್ತಪಡಿಸಿದ್ದಾರೆ.
ಶಾಲೆಗಳಲ್ಲಿ ಮುನ್ನೂರು ವಿದ್ಯಾರ್ಥಿಗಳು ಬಳಸುವ ಟಾಯ್ಲೆಟ್‌ನನ್ನೇ ಶಿಕ್ಷಕರು ಬಳಸಬೇಕಿದೆ. ಶುಚಿತ್ವ ಕಿಂಚಿತ್ತೂ ಇಲ್ಲ. ಇದರಿಂದ ಮಹಿಳಾ ಶಿಕ್ಷಕರಿಗೆ ಸೋಂಕು ಹೆಚ್ಚುತ್ತಿದೆ. ಶೌಚಾಲಯ ಬಳಕೆ ತಪ್ಪಿಸಲು, ಶಾಲೆಯಲ್ಲಿ ನೀರು ಕುಡಿಯುವುದನ್ನು ಶಿಕ್ಷಕರು ನಿಲ್ಲಿಸಿದ್ದಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ. ಅಲ್ಲದೇ ಮುಟ್ಟಿನ ದಿನಗಳಲ್ಲಿ ಟಾಯ್ಲೆಟ್ ಬಳಸುವುದು ಅಸಾಧ್ಯವಾಗಿದ್ದು, ಶುಚಿತ್ವ ಇಲ್ಲದೆ ಇನ್ನಿತರ ರೋಗಗಳಿಗೆ ಇದು ಕಾರಣವಾಗಿದೆ. ಹೆಚ್ಚು ಶಿಕ್ಷಕರು ಗಂಡಸರಾಗಿದ್ದು, ಈ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಲು ಸಾಧ್ಯವಾಗಿಲ್ಲ. ನಮಗೆ ಮೂರು ದಿನ ರಜೆ ಬೇಕು ಎಂದು ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss