ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಪಂಜ್ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿರುವುದಾಗಿ ಹೇಳಿರುವ ತಾಲಿಬಾನ್ ಇದೀಗ ಶೀಘ್ರದಲ್ಲೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದೆ.
ದೇಶದಲ್ಲಿ ಯುದ್ಧ ಮುಗಿದಿದೆ. ಇನ್ನೇನು ಸರ್ಕಾರ ರಚನೆಯಷ್ಟೇ ಬಾಕಿ ಎಂದು ತಾಲಿಬಾನ್ ವಕ್ತಾರ ಜಬೀಯುಲ್ಲ ಮುಜಾಹಿದ್ ಹೇಳಿದ್ದಾರೆ.
ಪಂಜ್ಶೀರ್ ಪ್ರಾಂತ್ಯ ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದೇವೆ ಎಂದು ಅನೇಕ ಬಾರಿ ತಾಲಿಬಾನ್ ಹೇಳಿದ್ದು, ಪ್ರತಿರೋಧ ಪಡೆಗಳು ಸೋಲನ್ನು ಒಪ್ಪಿರಲಿಲ್ಲ. ಪಂಜ್ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ಪಾಳೆಯ ನೆಲೆಗೊಂಡಿದ್ದು, ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಹೆಸರಿನ ಸಂಘಟನೆ ರಚನೆಯಾಗಿ ತಾಲಿಬಾನ್ ವಿರುದ್ಧ ಹೋರಾಡುವುದಾಗಿ ತಿಳಿಸಿತ್ತು.
ಅಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ತಾಲಿಬಾನ್ ಚೀನಾ ನೆರವು ಕೇಳಿದೆ. ಚೀನಾ ಜೊತೆಗೆ ಉತ್ತಮ ಸಂಬಂಧ ಹೊಂದಲು ಇಚ್ಛಿಸುತ್ತೇವೆ. ಚೀನಾ ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದು ಎಂದು ತಾಲಿಬಾನ್ ಹೇಳಿದೆ.