ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಗ್ಯಾರಂಟಿಗಳನ್ನು ನಾವು ಈಡೇರಿಸುತ್ತೇವೆ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಮೂರು ವರ್ಷಗಳಿಂದ ಲೂಟಿ ಮಾಡಿ ಬಿಜೆಪಿ ವಾಮಮಾರ್ಗ ಮೂಲಕ ಅಧಿಕಾರಕ್ಕೆ ಬಂದು ಕಳ್ಳತನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹರಿಹಾಯ್ದಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರದ ಎಲ್ಲ ಹುದ್ದೆಗಳ ನೇಮಕಾತಿಯಲ್ಲೂ ಹಗರಣ ನಡೆದಿದೆ. ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡ್​ ಆಗಿ ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ. ಡಬಲ್​ ಇಂಜಿನ್​ ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದೆ. ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ದಂಧೆ ನಡೆದಿದೆ ಎಂದು ವಾಗ್ದಾಳಿ ಮಾಡಿದರು.

ಮೋದಿ ಬಿಜೆಪಿ ನಾಯಕರ ಹೆಸರು ಹೇಳಿ ಭಾಷಣ ಮಾಡುವುದಿಲ್ಲ. ಆದ್ರೆ ನಾನು ನಮ್ಮ ನಾಯಕರ ಹೆಸರು ಹೇಳಿ ಭಾಷಣ ಆರಂಭಿಸುತ್ತೇನೆ. ಮೋದಿ ಜೊತೆ ರೋಡ್​ಶೋದಲ್ಲಿ ಸಿಎಂ ಬೊಮ್ಮಾಯಿ ಹಿರಿಯ ನಾಯಕ ಬಿ.ಎಸ್​ ಯಡಿಯೂರಪ್ಪ ಭಾಗಿಯಾಗುತ್ತಿಲ್ಲ. ಬೇರೆ ನಾಯಕರನ್ನು ತಮಗಿಂತಲೂ ಕೀಳು ಎಂದು ಭಾವಿಸುತ್ತಾರೆ.

ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚುತ್ತಿಲ್ಲ. ದ್ವೇಷದ ರಾಜಕಾರಣದಿಂದ ಮಣಿಪುರದಲ್ಲಿ ಹಿಂಸಾಚಾರ ನಡೀತಿದೆ. ಕರ್ನಾಟಕದ ಮಹಿಳೆಯರು, ಕಾರ್ಮಿಕರು, ಯುವಕರ ಬಗ್ಗೆ ಮಾತನಾಡಿ. ಭವಿಷ್ಯದಲ್ಲಿ ಏನೂ ಮಾತನಾಡ್ತೀರಿ ಎಂದು ಕೂಡ ಮೋದಿ ಹೇಳುತ್ತಿಲ್ಲ ಎಂದರು.

ಮಹಿಳೆಯರಿಗೆ ನಾವು ಗೃಹಲಕ್ಷ್ಮೀ ಯೋಜನೆ ಮೂಲಕ ಗೃಹಿಣಿಗೆ ಮಾಸಿಕ 2 ಸಾವಿರ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತೇವೆ. ಪದವೀಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3 ಸಾವಿರ ಹಣ ಜಮೆ ಮಾಡುತ್ತೇವೆ.ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್​ ನೀಡುತ್ತೇವೆ.ರೈತರಿಗೆ ಹೆಚ್ಚಿನ ಅನುದಾನ ಮೀಸಲಿಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಎಲ್ಲ ಗ್ಯಾರಂಟಿಗಳನ್ನು ನಾವು ಈಡೇರಿಸುತ್ತೇವೆ. ಮೇ 10ರಂದು ಕಾಂಗ್ರೆಸ್​ಗೆ ವೋಟ್ ಹಾಕಿ ಗೆಲ್ಲಿಸುವಂತೆ ರಾಹುಲ್ ಗಾಂಧಿ ಮನವಿ ಮಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!