‘ಬಾಬರ್ ಗಿಂತ ಹೆಚ್ಚು ನಿಮ್ಮನ್ನು ಪ್ರೀತಿಸುತ್ತೇವೆ’: ಮುಲ್ತಾನ್ ಟೆಸ್ಟ್ ವೇಳೆ ವಿರಾಟ್ ಕೊಹ್ಲಿಗೆ ಪಾಕ್ ಅಭಿಮಾನಿಗಳ‌ ಪ್ರೀತಿಯ ಸಂದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ ಗೆ ಒಂದು ವರ್ಷ ಬಾಕಿ ಇರುವಂತೆಯೇ ಬಾರಿ ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಈ ಟೂರ್ನಿಯಲ್ಲಿ ಭಾರತ ಭಾಗಿಯಾಗುವುದು ಬಹುಪಾಲು ಅನುಮಾನ. ಕಳೆದ ಅಕ್ಟೋಬರ್‌ನಲ್ಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು 2023 ರ ಏಷ್ಯಾ ಕಪ್ ಅನ್ನು ಪಾಕಿಸ್ತಾನದಲ್ಲಿ ನಡೆದರೆ ನಾವು ಹೋಗಲ್ಲ, ಅದು ತಟಸ್ಥ ಸ್ಥಳದಲ್ಲಿ ನಡೆಯಲಿ ಎಂದು ಹೇಳಿದೆ. ಮಂಡಳಿಗಳ ನಿರ್ಧಾರಗಳೇನೇ ಇರಲಿ ಪಾಕ್‌ ಅಭಿಮಾನಿಗಳು ಮಾತ್ರ ತಮ್ಮ ಆರಾಧ್ಯ ದೈವ ವಿರಾಟ್‌ ಕೊಹ್ಲಿ ಪಾಕಿಸ್ತಾನಕ್ಕೆ ಬಂದು ಆಡಲಿ ಎಂದು ಹಾರೈಸುತ್ತಿದ್ದಾರೆ. ಪಾಕ್‌ ನ ಮುಲ್ತಾನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ನಲ್ಲಿ ಪಾಕ್‌ ವಿರಾಟ್ ಅಭಿಮಾನಿಗಳ‌ ಇಂತಹ ಪ್ರೀತಿಯ ಸಂದೇಶಗಳು ವೈರಲ್‌ ಆಗುತ್ತವೆ.
ಮುಲ್ತಾನ್ ಟೆಸ್ಟ್ ವೇಳೆ ಪಾಕಿಸ್ತಾನದ ಇಬ್ಬರು ಅಭಿಮಾನಿಗಳು ಫಲಕಗಳ ಹಿಡಿದು ಭಾರತ ತಂಡದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿಗೆ ವಿಶಿಷ್ಟ ಸಂದೇಶ ನೀಡಿದ್ದಾರೆ.  “ಹಾಯ್ ಕಿಂಗ್ ಕೊಹ್ಲಿ.. ನಾವು ಬಾಬರ್‌ ಅಜಂಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇವೆ.” ನಮ್ಮ ನೆಲದಲ್ಲಿ ಏಷ್ಯಾ ಕಪ್ ನಲ್ಲಿ ಆಡುವುದನ್ನು ನೋಡಲು ಬಯಸುತ್ತೇವೆ” ಎಂದು ಆ ಫಲಕಗಳಲ್ಲಿ ಬರೆದುಕೊಂಡಿದ್ದು ಸಾಮಾಣಜಿಕ ತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ.

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಏಷ್ಯಾ ಕಪ್ 2023 ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ಮಂಡಳಿಯ ನಿರ್ಧಾರ ಅಲ್ಲ, ನಾವು ಸರ್ಕಾರದ ನಿರ್ಧಾರವನ್ನು ಅವಲಂಬಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!