Tuesday, July 5, 2022

Latest Posts

‘2024ರ ಚುನಾವಣೆಯಲ್ಲೂ ನಮಗೇ ಗೆಲುವು, ಮತ್ತೆ ಮೋದಿಯವರೇ ಪ್ರಧಾನಿ’

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನರೇಂದ್ರ ಮೋದಿಯವರೇ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ. ಅವರೇ ಮತ್ತೆ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಮಾತ್ರ 20 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ನಿರಂತರವಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದಾರೆ. ಇವರನ್ನು ಬಿಟ್ಟು ಇನ್ಯಾವ ನಾಯಕರೂ ಇಷ್ಟು ವರ್ಷ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಗುಜರಾತ್‌ನ ಗಾಂಧಿನಗರದ ಪಾನ್ಸಾರ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದು,
ಪ್ರಧಾನಿ ಮೋದಿಯವರು ಒಂದು ದಿನವೂ ಬ್ರೇಕ್ ಇಲ್ಲದೆ ಜನರಿಗಾಗಿ ಸೇವೆ ಮಾಡಿದ್ದಾರೆ. ಈ ರೀತಿ ಯಾವ ನಾಯಕನೂ ಮಾಡಿಲ್ಲ, ಮಾಡುವುದೂ ಇಲ್ಲ. ನರೇಂದ್ರ ಮೋದಿಯವರನ್ನು ಜನ ಮೆಚ್ಚಿದ್ದಾಗಿದೆ. ಮತ್ತೆ ಮತ್ತೆ ಇವರೇ ನಮ್ಮ ಪ್ರಧಾನಿಯಾಗಲಿದ್ದಾರೆ. ಇದರಲ್ಲಿ ಯಾವ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss