Saturday, August 13, 2022

Latest Posts

ಮಾನವೀಯತೆಗಾಗಿ ಸಂಪತ್ತು, ಮೌಲ್ಯ ಬೆಳೆಸುವುದೇ ಆತ್ಮನಿರ್ಭರ ಭಾರತದ ತಿರುಳು: ಪ್ರಧಾನಿ ಮೋದಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

”ಇಡೀ ಜಗತಿಗೆಯೇ ಆತ್ಮನಿರ್ಭರ ಭಾರತ ಉತ್ತಮವಾದುದು. ಮಾನವೀಯತೆಗಾಗಿ ಸಂಪತ್ತು, ಮೌಲ್ಯ ಬೆಳೆಸುವುದೇ ಆತ್ಮನಿರ್ಭರ ಭಾರತದ ತಿರುಳು” ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಸ್ವಾಮಿ ಚಿದ್ಭಾವನಂದರ ‘ಭಗವದ್ಗೀತೆ’ ಕೃತಿಯ ಇ-ಪುಸ್ತಕ ಆವೃತ್ತಿಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು , ಭಾರತವನ್ನು ಆತ್ಮನಿರ್ಭರ ದೇಶವನ್ನಾಗಿಸುವುದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ದೇಶದ 1.3 ಬಿಲಿಯನ್ ಪ್ರಜೆಗಳು ನಿರ್ಧರಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ, ಜಗತ್ತಿಗೆ ಔಷಧದ ಅಗತ್ಯಬಿದ್ದಾಗ, ಭಾರತ ತನ್ನಿಂದಾದಷ್ಟು ಮಟ್ಟಿಗೆ ಔಷಧ ಪೂರೈಸಿದೆ. ಕೊರೋನಾ ಸಾಂಕ್ರಾಮಿಕ ವಿಶ್ವವನ್ನೇ ಕಂಗೆಡಿಸಿದ್ದಾಗ ನಮ್ಮ ವಿಜ್ಞಾನಿಗಳು ತ್ವರಿತವಾಗಿ ಲಸಿಕೆ ಸಿದ್ಧಪಡಿಸಿದ್ದಾರೆ. ಈಗ ದೇಶದಲ್ಲಿ ತಯಾರಾದ ಲಸಿಕೆಗಳು ವಿಶ್ವದೆಲ್ಲೆಡೆ ಪೂರೈಕೆಯಾಗುತ್ತಿದೆ. . ಕೊರೋನ ಸಾಂಕ್ರಾಮಿಕದ ವಿರುದ್ಧ ವಿಶ್ವದೆಲ್ಲೆಡೆ ಕಠಿಣ ಹೋರಾಟ ಮುಂದುವರಿದಿದೆ. ಈ ಸೋಂಕಿನ ಕಾರಣದಿಂದಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳೂ ವ್ಯಾಪಕವಾಗಿವೆ. ಇಂತಹ ಸಮಯದಲ್ಲಿ ಭಗವದ್ಗೀತೆಯಲ್ಲಿ ತೋರಿರುವ ಮಾರ್ಗವು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಮಾನವ ಕುಲಕ್ಕೆ ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ಯಶಸ್ವಿಯಾಗುವ ಮಾರ್ಗ ಮತ್ತು ಶಕ್ತಿಯನ್ನು ಗೀತೆ ನೀಡುತ್ತದೆ. ಇಂತಹ ಹಲವು ಉದಾಹರಣೆಗಳು ನಮ್ಮೆದುರಿಗಿವೆ. ಆಳ, ವೈವಿಧ್ಯತೆ ಮತ್ತು ನಮ್ಯತೆ ಭಗವದ್ಗೀತೆಯ ವೈಶಿಷ್ಟವಾಗಿದೆ ಎಂದು ಮೋದಿ ಹೇಳಿದರು.
”ಕಾಯಕ ಮಾಡುವುದರಿಂದ ನಾನು ಏನನ್ನೂ ಸಾಧಿಸಬಹುದು ಎಂಬುದು ಈ ಮಹಾಕಾವ್ಯದ ಮೂಲ ಸಂದೇಶವಾಗಿದೆ. ಅದೇ ರೀತಿ ದೇಶದ 103 ಕೋಟಿ ಜನರು ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡಲಿದ್ದಾರೆ. ನಮ್ಮ ದೇಶ ಆತ್ಮ ನಿರ್ಭರವಾಗಬೇಕು ಎಂಬುದು ಎಲ್ಲರ ಇಚ್ಛೆ” ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss