Sunday, April 18, 2021

Latest Posts

ಮಾಸ್ಕ್ ಧರಿಸಿ, ಜೀವ ಉಳಿಸಲು ಗೂಗಲ್ ಡೂಡಲ್ ಮನವಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮಾಸ್ಕ್ ಧರಿಸುವುದು, ಕೈಗಳ ತೊಳೆಯುವುದು ಮತ್ತು ಸಾಮಾಜಿಕ ಅಂತರರ ಕಾಪಾಡಿಕೊಳ್ಳುವುದರ ಮಹತ್ವ ಸಾರುವ ವಿಚಾರವನ್ನು ಗೂಗಲ್ ತನ್ನ ಹೊಸ ಡೂಡಲ್ ಮೂಲಕ ನೀಡಿದೆ.
ಪ್ರತಿ ವಿಶೇಷ ದಿನ, ಸಂದರ್ಭ ಗೂಗಲ್ ವಿಶಿಷ್ಟ ರೀತಿಯ ಡೂಡಲ್ ಸಂದೇಶಗಳನ್ನು ನೀಡುತ್ತದೆ. ಮಂಗಳವಾರ ಗೂಗಲ್ ಡೂಡಲ್‌ನ ಅನಿಮೇಷನ್ ವಿಡಿಯೋ ಗಮನ ಸೆಳೆಯುವಂತಿದೆ.
ಡೂಡಲ್‌ನ ಮೇಲೆ ಮೌಸ್ ಕರ್ಸರ್ ಇರಿಸಿದರೆ, ‘ಮಾಸ್ಕ್‌ಗಳು ಈಗಲೂ ಬಹಳ ಮುಖ್ಯ. ಮಾಸ್ಕ್ ಧರಿಸಿ ಜೀವಗಳನ್ನು ಉಳಿಸಿ’ ಎಂಬ ಸಂದೇಶ ಮೂಡುತ್ತದೆ. ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಅದು ಕೋವಿಡ್ ತಡೆಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ವಿವರಗಳಿರುವ ಪುಟವನ್ನು ತೆರೆಯುತ್ತದೆ.
ಈ ಪುಟ ಕೂಡ ಕೊರೊನಾ ವೈರಸ್ ತಡೆಗೆ ಅನುಸರಿಸುವ ಕ್ರಮಗಳನ್ನು ತಿಳಿಸುತ್ತದೆ. ‘ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಸೋಪ್ ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಿ. ಕೆಮ್ಮುವ ಅಥವಾ ಸೀನುವ ವ್ಯಕ್ತಿಯಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. ದೈಹಿಕ ಅಂತರ ಸಾಧ್ಯವಾಗದ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ನಿಮ್ಮ ಕಣ್ಣು, ಮೂಗು ಹಾಗೂ ಬಾಯನ್ನು ಮುಟ್ಟಿಕೊಳ್ಳಬೇಡಿ. ಸೀನುವಾಗ ಅಥವಾ ಕೆಮ್ಮುವಾಗ ಮೊಣಕೈ ಅಥವಾ ಟಿಶ್ಯೂವಿನಿಂದ ಮೂಗು ಮತ್ತು ಬಾಯನ್ನು ಮುಚ್ಚಿಕೊಳ್ಳಿ ಎಂದು ಸಲಹೆ ನೀಡಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss