Thursday, August 11, 2022

Latest Posts

ಕೋವಿಡ್ ಪ್ರಕರಣ ಹೆಚ್ಚಳ: ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು

ದಿಗಂತ ವರದಿ ಮೈಸೂರು:

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರು ಮಾಸ್ಕ್ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ಹೆಚ್ಚಳಗೊಂಡಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿಏರಿಕೆಕAಡಿದೆ. ಇದರಜೊತೆಗೆ ಪಕ್ಕದ ಮಹಾರಾಷ್ಟç ಹಾಗೂ ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆರಾಜ್ಯದಲ್ಲಿಕೂಡಸೋಂಕು ಹೆಚ್ಚಾಗುವ ಭೀತಿಎದುರಾಗಿದ್ದು, ಎರಡನೇ ಅಲೆಯನ್ನು ಎದುರಿಸುವಂತಹ ಆತಂಕ ಸೃಷ್ಟಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರುಈ ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸದೆ, ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದ್ದಾರೆ.
ಯಾವುದೇಜ್ವರ, ಕೆಮ್ಮು, ಶೀತ, ತಲೆನೋವಿನಂತಹ ಕೋವಿಡ್ ರೋಗದ ಗುಣಲಕ್ಷಣಗಳು ಕಂಡುಬAದಲ್ಲಿಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದಲ್ಲದೆ, 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಹಾಗೂ ಯಾವುದಾದರೂ ದೀರ್ಘಕಾಲಿನ ಕಾಯಿಲೆಗಳಿಂದ (ಛಿomoಡಿbiಜiಣies)ಬಳಲುತ್ತಿರುವ45 ರಿಂದ 60 ವರ್ಷ ವಯೋಮಾನದವರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕೋವಿಡ್-19 ಹರಡದಂತೆತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಜಾರಿಮಾಡಿರುವ ಹೊಸ ಮಾರ್ಗಸೂಚಿಯನ್ನುಕಟ್ಟುನಿಟ್ಟಾಗಿ ಜಾರಿಗೆತರಲಾಗುವುದು ಎಂದು ಹೇಳಿದ್ದಾರೆ.
ಮದುವೆ, ಸಭೆ ಸಮಾರಂಭಗಳು, ಜಾತ್ರೆ-ಉತ್ಸವಗಳು, ಇಂತಹ ಕಾರ್ಯಕ್ರಮಗಳಲ್ಲಿ (suಠಿeಡಿsಠಿಡಿeಚಿಜeಡಿ eveಟಿಣ) ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಸಾವಿರಾರುಜನರು ಬಂದು-ಹೋಗುವುದರಿAದ ಕೋವಿಡ್-19 ಬಹುಬೇಗ ವ್ಯಾಪಕವಾಗಿ ಹರಡುತ್ತದೆ. ಆದ್ದರಿಂದಇAತಹಜನಸAದಣಿ ಪ್ರದೇಶಗಳಿಂದ ದೂರ ಇರಬೇಕಾಗಿದೆ.
ಕಳೆದ 2020ರ ಜುಲೈ ತಿಂಗಳಲ್ಲಿ ಮೈಸೂರು ನಗರದಲ್ಲಿ ಇದ್ದಂತಹ ಕೋವಿಡ್ ಪರಿಸ್ಥಿತಿ ಈಗ ಮರುಕಳಿಸಿದೆ. ಕಳೆದ 2021ರ ಫೆಬ್ರವರಿ 26 ರಿಂದ ಮಾರ್ಚ್ 4ರ ಅವಧಿಯಲ್ಲಿ ಮೈಸೂರಲ್ಲಿ 127 ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್ 5ರಿಂದ ಮಾರ್ಚ್ 11ರ ಅವಧಿಯಲ್ಲಿ ಈ ಪ್ರಕರಣ 185ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಎಲ್ಲರೂ ಜಾಗೃತಿ ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕುಲಬುರ್ಗಿ, ಬೀದರ್, ಮತ್ತು ಬೆಂಗಳೂರು ನಗರಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳು ತುಂಬಾಏರುಗತಿಯಲ್ಲಿ ಇವೆ. ಮೈಸೂರಿಗೆ ಅಂತಹ ಪರಿಸ್ಥಿತಿ ಬರದಂತೆ ನಿಯಂತ್ರಣ ಮಾಡುವುದಕ್ಕೆ ಸಾರ್ವಜನಿಕರ ಸಹಕಾರ ಬೇಕಾಗಿದೆ. ಪರಿಸ್ಥಿತಿ ಗಂಭೀರ ಹಂತತಲುಪುವ ಮೊದಲೇ ಸಾರ್ವಜನಿಕರು ಎಚ್ಚರಿಕೆ ವಹಿಸುವ ಮೂಲಕ ಸೋಂಕು ಹರಡದಂತೆ ತಡೆಗಟ್ಟಬೇಕಿದೆ ಎಂದಿದ್ದಾರೆ.
ಮೈಸೂರಿನ ಪ್ರಜ್ಞಾವಂತ ನಾಗರಿಕರಸಹಕಾರದಿಂದಾಗಿ ಕಳೆದ ವರ್ಷ ಜಿಲ್ಲಾದ್ಯಾಂತ ಸೋಂಕು ನಿಯಂತ್ರಿಸಲು ಸಾಧ್ಯವಾಗಿತ್ತು. ಅದರಂತೆ ಈ ಬಾರಿಯೂಕೂಡ ಸಾರ್ವಜನಿಕರ ಸಹಕಾರಅಗತ್ಯವಾಗಿದ್ದು, ಸರ್ಕಾರಇತ್ತೀಚಿಗೆ ಹೊರಡಿಸಿದ ಕೋವಿಡ್-19ರ ನಿಯಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಂಡು ಸಹಕಾರ ನೀಡುವಂತೆ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss