ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇತ್ತೀಚೆಗೆ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದು ಒಂದು ಕ್ರೇಜ್ ಆಗಿದೆ. ಅದರಲೂ ವೆಡ್ಡಿಂಗ್ ಶೂಟ್ ಗಳನ್ನು ನಾನಾತರದಲ್ಲಿ ಮಾಡಿಸುತ್ತಾರೆ.
ಇದೀಗ ಡಿಫರೆಂಟ್ ಆಗಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ ಇಸ್ಲಾಮಾಬಾದ್ ಜೋಡಿಯ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಹೌದು.. ಈ ದಂಪತಿ ಸಿಂಹದ ಮರಿಯ ಜೊತೆ ವಿಡಿಯೋ, ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಪ್ರಾಣಿ ಹಿಂಸೆಗೆ ಸಮವಾಗಿದ್ದು ಎಂದು ನೆಟ್ಟಿಗರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
@PunjabWildlife does your permit allow for a lion cub to be rented out for ceremonies?Look at this poor cub sedated and being used as a prop.This studio is in Lahore where this cub is being kept.Rescue him please pic.twitter.com/fMcqZnoRMd
— save the wild (@wildpakistan) March 7, 2021
ಈ ವೆಡ್ಡಿಂಗ್ ಶೂಟ್ ಮಾಡಿದ ಸ್ಟುಡಿಯೋ ಇನ್ಸ್ಟಾಗ್ರಾಂ ಖಾತೆ ಈ ಫೋಟೋ, ವಿಡಿಯೋ ಹಂಚಿಕೊಂಡಿದ್ದು, ಫೋಟೋಗಾಗಿಯೇ ಹುಲಿ ಮರಿಯನ್ನು ತರಲಾಗಿತ್ತು. ಅದು ನಿದ್ದೆ ಮಾಡುತ್ತಿರುವಾಗ ಫೋಟೋ ತೆಗೆಸಿಕೊಂಡಿರುವುದಾಗಿ ಅವರು ಹೇಳಿದ್ದರು.
ನಂತರ “ಸ್ಟುಡಿಯೋ ಈ ಪ್ರಾಣಿಯನ್ನು ದುರುಪಯೋಗಪಡಿಸಿಕೊಂಡಿದೆ, ಅದಕ್ಕೆ ನಿದ್ರೆ ಭರಿಸುವ ಔಷಧಿ ಕೊಟ್ಟು ಫೋಟೋ ತೆಗೆಯಲಾಗಿದೆ” ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.
ಈ ಎಲ್ಲ ಟೀಕೆ, ವಿರೋಧಗಳ ನಂತರ ಸ್ಟುಡಿಯೋ ಆ ಫೋಟೋವನ್ನು ತನ್ನ ಖಾತೆಯಿಂದ ಡಿಲೀಟ್ ಮಾಡಿದೆ. ಆದಾಗ್ಯೂ ಅದರ ಸ್ಕ್ರೀನ್ ಶಾಟ್ ಗಳು ಎಲ್ಲೆಡೆ ಹರಿದಾಡುತ್ತಿವೆ.
ಈ ಸಿಂಹದ ಮರಿಯನ್ನು ದುರುಪಯೋಗಪಡಿಸಿಕೊಂಡಿಲ್ಲ ಅಥವಾ ಅದಕ್ಕೆ ನಿದ್ರೆ ಭರಿಸುವ ಔಷಧಿ ಕೊಟ್ಟಿಲ್ಲ, ಅದು ಸಾಕುಪ್ರಾಣಿ ಆಗಿದ್ದು, ಫೋಟೋ ಶೂಟ್ ಸಮಯದಲ್ಲಿ ಅದರ ಮಾಲೀಕರು ಸಹ ಇದ್ದರು ಎಂದು ಸ್ಟುಡಿಯೋ ಸ್ಪಷ್ಟಪಡಿಸಿದೆ. ಆದರೂ ನೆಟ್ಟಿಗರೂ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ