ಷೇರು ಮಾರ್ಕೆಟ್ ಭಾಷೆಯಲ್ಲಿ ಮದುವೆ ಆಮಂತ್ರಣ ಕಾರ್ಡ್: ಇಲ್ಲಿ ಸ್ನೇಹಿತರೇ ಚಿಲ್ಲರೆ ಹೂಡಿಕೆದಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮದುವೆಯ ಅಂದ್ಮೇಲೆ ಆಮಂತ್ರಣ ಪತ್ರಿಕೆ ಇದ್ದೆ ಇರುತ್ತೆ. ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಕುರಿತು ಹೇಗೆ ಕನಸು ಕಾಣುತ್ತಾರೋ ಹಾಗೆಯೇ ಅದ್ಕಕೆ ತಕ್ಕಂತೆ ಪ್ಲಾನ್ ಮಾಡುತ್ತಾರೆ. ಅದ್ರಲ್ಲಿ ಆಮಂತ್ರಣ ಪತ್ರಿಕೆ ಅತೀ ಮುಖ್ಯ. ಇತ್ತೀಚಿನ ದಿನಗಳಲ್ಲಿ ಗ್ರ್ಯಾಂಡ್ ಆಗಿ ಮಾಡಿಸುವುದುಕಾಮನ್. ಆದರೆ ಮಹಾರಾಷ್ಟ್ರದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ಟಾಕ್ ಮಾರ್ಕೆಟ್ (Stock Market) ಪರಿಭಾಷೆಯಲ್ಲಿ ಮಾಡಿಸಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‍ನ ಜೋಡಿಗಳು ಉದ್ಯೋಗದಲ್ಲಿ ವೈದ್ಯರಾಗಿದ್ದು, ಷೇರು ಮಾರುಕಟ್ಟೆಯಿಂದ ಪ್ರೇರಿತರಾಗಿದ್ದಾರೆ. ಹೀಗಾಗಿ ಷೇರು ಮಾರುಕಟ್ಟೆಯ ಪರಿಭಾಷೆಯಲ್ಲೇ ತಮ್ಮ ಮದುವೆ ಕಾರ್ಡ್‍ನ್ನು ಮಾಡಿಸಿದ್ದಾರೆ. ಈ ಕಾರ್ಡಿನ ವಿಶೇಷವೆಂದರೆ ಆಮಂತ್ರಣದಲ್ಲಿ ಬರುವ ಪ್ರತಿ ಶಬ್ದವನ್ನು ಷೇರು ಮಾರುಕಟ್ಟೆಗೆ ಸಂಬಂಧಿಸಿ ತಯಾರಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

ಆಮಂತ್ರಣ ಕಾರ್ಡ್‍ನಲ್ಲಿ ಏನಿದೆ?
ವರನನ್ನು ಡಾ. ಸಂದೇಶ್ ಮೆಡಿಸಿನ್ ಲಿಮಿಟೆಡ್ ಎಂದು ಪರಿಚಯಿಸಿದ್ದರೆ ಮತ್ತು ಡಾ. ದಿವ್ಯಾ ಅನೆಸ್ತೇಶಿಯಾ ಲಿಮಿಟೆಡ್ ತಿಳಿಸಿದ್ದಾರೆ. ಇದು 2 ಘಟಕಗಳ ವಿಲೀನದ ಕಾರ್ಡ್ ಆಗಿದೆ ಎಂದು ತಿಳಿಸಿದ್ದಾರೆ. ಕಾರ್ಡ್‍ನ ಆರಂಭದಲ್ಲಿ ಅತ್ಯಮೂಲ್ಯ ಕಾರ್ಯಕ್ರಮದ ಆಹ್ವಾನಕ್ಕಾಗಿ ಎಂದು ತಿಳಿಸಿದೆ. ವಿಲೀನಗೊಂಡ ಘಟಕಗಳನ್ನು ನಿಯಂತ್ರಕ ಮಾನದಂಡಗಳಿಗೆ (ಹಿಂದೂ ಸಂಪ್ರದಾಯ) ಅನುಸಾರವಾಗಿ ಪಟ್ಟಿ ಮಾಡಲಾಗುತ್ತದೆ ಎಂದು ಬರೆದಿದ್ದಾರೆ.


ವಿವಾಹ ಸಮಾರಂಭವನ್ನು ಪಟ್ಟಿ ಸಮಾರಂಭ ಬರೆದಿರುವ ಅವರು, ಸ್ನೇಹಿತರನ್ನು ಹಾಗೂ ಕುಟುಂಬದವರನ್ನು ಚಿಲ್ಲರೆ ಹೂಡಿಕೆದಾರರು ಎಂದಿದ್ದಾರೆ. ಸಮಾರಂಭಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳಿಗೆ ಸ್ಟಾಕ್ ಮಾರ್ಕೆಟ್‍ಗೆ ಸಂಬಂಧಿಸಿದ ಹೆಸರನ್ನೇ ನೀಡಿದ್ದಾರೆ. ಸಂಗೀತವನ್ನು ರಿಂಗಿಂಗ್ ಬೆಲ್, ಸ್ವಾಗತವನ್ನು ಮಧ್ಯಂತರ ಡಿವಿಡೆಂಡ್ ಪಾವತಿ ಎಂದು ತಿಳಿಸಿದ್ದಾರೆ. ಡಿಸೆಂಬರ್ 6 ಮತ್ತು 7 ಬಿಡ್ಡಿಂಗ್ ದಿನಾಂಕವಾಗಿದ್ದು, ಗುಲ್ಬರ್ಗದ ಹುನ್ನಾಬಾದ್ ರಸ್ತೆಯಲ್ಲಿರುವ ಸಾಕಾಸರ್ ಗಾರ್ಡನ್ಸ್‍ನಲ್ಲಿ ಸ್ಟಾಕ್ ಎಕ್ಸ್‍ಚೇಂಜ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಬೋನಸ್ ರೂಪದಲ್ಲಿ ಸ್ಥಳೀಯದಲ್ಲವರಿಗೆ ಇರಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!