Tuesday, June 28, 2022

Latest Posts

ವೆಲ್ ಕಮ್ ಧೋನಿ: ದುಬೈನಲ್ಲಿ ಮೆಂಟರ್​ ಆಗಿ ಭಾರತ ತಂಡ ಸೇರಿಕೊಂಡ ಮಾಹಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್​​ ಟೂರ್ನಿ ಮುಗಿದಿದ್ದು, ಇದೀಗ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮೆಂಟರ್​ ಆಗಿ ದುಬೈನಲ್ಲಿದ್ದಾರೆ.
ಐಪಿಎಲ್ ಮುಗಿದು ಎರಡು ದಿನದ ಬಳಿಕ ದುಬೈನಲ್ಲಿ ಬೀಡುಬಿಟ್ಟಿರುವ ಭಾರತ ತಂಡವನ್ನು ಅವರು ಭಾನುವಾರ ಸೇರಿಕೊಂಡರು. ಕಳೆದ ತಿಂಗಳು ಧೋನಿ ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ನೇಮಕವಾಗಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಕಿಂಗ್ ಎಂ.ಎಸ್.ಧೋನಿಗೆ ಆತ್ಮೀಯ ಸ್ವಾಗತ. ಟೀಂ ಇಂಡಿಯಾದ ಹೊಸ ಪಾತ್ರಕ್ಕೆ ಮರಳಿದ್ದಾರೆ ಎಂದಿದೆ. ಈ ಫೋಟೋದಲ್ಲಿ ಟೀಂ ಇಂಡಿಯಾ ಬೌಲಿಂಗ್ ಕೋಚ್​ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಸೇರಿದಂತೆ ಇತರರು ಕಂಡುಬರುತ್ತಾರೆ.

 

ಧೋನಿ ಐಸಿಸಿ ಕ್ರಿಕೆಟ್​ನ ಮೂರು ಮಾದರಿಯ ಟೂರ್ನಿಗಳಲ್ಲಿ ಕಪ್ ಗೆದ್ದಿದ್ದಾರೆ. 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದಲ್ಲದೆ, 2010, 2011, 2018 ಮತ್ತು 2021ರ ಐಪಿಎಲ್​ ಪ್ರಶಸ್ತಿ ಗೆದ್ದು, ಯಶಸ್ವಿ ನಾಯಕ ಎನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss