ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………….
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸಂಕಷ್ಟದಲ್ಲಿ ಭಾರತದ ಜೊತೆಗೆ ಅನೇಕ ಜನರು ಸಾಥ್ ನೀಡಿದ್ದು, ಇದೀಗ ಭಾರತದ ಜೊತೆ ನಿಲ್ಲುವುದಾಗಿ ಐರಿಶ್ ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಫೈಟರ್ ಕಾನರ್ ಮ್ಯಾಕ್ಗ್ರೆಗರ್ ಹೇಳಿದ್ದಾರೆ.
ತಾವು ಭಾರತದ ಫೈಟರ್ ರಾಮ್ಸ್ಟನ್ ಎಡ್ವಿನ್ ರೊಡ್ರಿಗಸ್ ಅವರಿಗೆ ತರಬೇತಿ ನೀಡುತ್ತಿರುವ ಫೋಟೋ ಹಾಕಿರುವ ಕಾನರ್ ಮ್ಯಾಕ್ಗ್ರೆಗರ್,’ ಭಾರತದ ಮುಂದಿನ ಹೆವಿ ವೇಯ್ಟ್ ಚಾಂಪಿಯನ್ ರಾಮ್ಸ್ಟನ್ ಎಡ್ವಿನ್ ರೊಡ್ರಿಗಸ್ ಅವರೊಂದಿಗಿನ ತರಬೇತಿಯಿಂದಾಗಿ ಭಾರತ ಹಾಗೂ ಅಲ್ಲಿನ ಜನರು ನಿಜವಾಗಿಯೂ ಬಲಿಷ್ಠರು ಎಂಬುದನ್ನು ಸ್ವತಃ ಕಂಡಿದ್ದೇನೆ. ಭಾರತ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದು, ಅದರ ಹೋರಾಟದಲ್ಲಿ ಜೊತೆಯಾಗಿರುತ್ತೇನೆ, ನಾವು ಭಾರತದೊಂದಿಗೆ ಇದ್ದೇವೆ, ಜಗತ್ತು ಭಾರತದೊಂದಿಗೆ ಇದೆ’ ಎಂದು ಹೇಳಿದ್ದಾರೆ.
ರಾಮ್ಸ್ಟನ್ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಕಾನರ್ ಮ್ಯಾಕ್ಗ್ರೆಗರ್ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ‘ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಚಾಂಪ್ ಕಾನರ್ ಮ್ಯಾಕ್ಗ್ರೆಗರ್, ನಾವು ಕಲಿತು, ಹಿಂದೆಂದಿಗಿಂತಲೂ ಬಲಿಷ್ಠವಾಗಿ ಭಾರತ ಹೊರಹೊಮ್ಮಲಿದೆ’ ಎಂದು ಕಾನರ್ ಮ್ಯಾಕ್ಗ್ರೆಗರ್ ಗೆ ಧನ್ಯವಾದ ತಿಳಿಸಿದ್ದಾರೆ.
Training with India’s next heavyweight champion 🇮🇳
I know first hand how strong India and its people truly are!
I stand with India in their fight through Covid. Let’s go India! We are with you!
The world is with you! 🇮🇳❤️🇮🇪 https://t.co/yUuLOutQQy pic.twitter.com/yfdNtkxYqP— Conor McGregor (@TheNotoriousMMA) May 12, 2021