Monday, August 15, 2022

Latest Posts

ರಂಗೇರಿದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ: ಭಾರೀ ಭರವಸೆಗಳ ಪ್ರಣಾಳಿಕೆ ಬಿಡುಗಡೆಗೊಳಿಸಿದ ದೀದಿ!

ಹೊಸದಿಗಂತ, ಆನ್‌ಲೈನ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ರಾಜ್ಯದಲ್ಲಿ ವ್ಯಾಪಕ ಜನಾಕ್ರೋಶ ಎದುರಿಸುತ್ತಿರುವ ಆಳುವ ತೃಣಮೂಲ ಕಾಂಗ್ರೆಸ್ ಈ ಬಾರಿ ಹೇಗಾದರೂ ಅಧಿಕಾರ ಉಳಿಸಿಕೊಳ್ಳುವ ಯತ್ನವೊಂದರಲ್ಲಿ ಭಾರೀ ಘೋಷಣೆಗಳುಳ್ಳ ಪ್ರಣಾಳಿಕೆಯೊಂದನ್ನು ಬುಧವಾರ ಬಿಡುಗಡೆಗೊಳಿಸಿತು.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ತನ್ನ ಸರ್ಕಾರ ರಾಜ್ಯದಲ್ಲಿ ಬಡತನದ ಪ್ರಮಾಣವನ್ನು ಶೇ. 40ರಷ್ಟು ಕಡಿಮೆ ಮಾಡಿದೆ ಎಂದು ಹೇಳಿಕೊಂಡರಲ್ಲದೆ, ವರ್ಷಕ್ಕೆ 5 ಲಕ್ಷ ಉದ್ಯೋಗ ಸೃಷ್ಟಿ, ಬಂಗಾಳದಲ್ಲಿ ಸಾಮಾನ್ಯ ವರ್ಗ ಮತ್ತು ಹಿಂದುಳಿದ ಸಮುದಾಯದ ಕನಿಷ್ಠ ವಾರ್ಷಿಕ ಆದಾಯವನ್ನು 6,000 ರೂ. ಮತ್ತು 12,000 ರೂ.ಗೆ ಏರಿಕೆ, 18 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರಿಗೆ ತಿಂಗಳಿಗೆ 1000 ರೂ. ಪಿಂಚಣಿ ಹಾಗೂ 1.6 ಕೋಟಿ ಮನೆಗಳಲ್ಲಿ ಮಹಿಳೆಯರ ಮೂಲ ಮಾಸಿಕ ಆದಾಯ ಖಾತ್ರಿ ಸೇರಿದಂತೆ ಹಲವು ಭರವಸೆಗಳನ್ನು ಪ್ರಕಟಿಸಿದರು.
ಹೊಸ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯಂದರಲ್ಲಿ 10 ಲಕ್ಷ ರೂ.ಗಳ ಸಾಲ ಮಿತಿಯೊಂದಿಗೆ ಪರಿಚಯಿಸಲಾಗುವುದು ಮತ್ತು ಕೇವಲ ಶೇ.4ರ ಬಡ್ಡಿದರವನ್ನು ವಿಧಿಸಲಾಗುವುದು ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss