ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಪಶ್ಚಿಮ ಬಂಗಾಳ ಕಿರಿಯ ವೈದ್ಯರು, ಬೇಡಿಕೆಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವೈದ್ಯಕೀಯ ಸಂಸ್ಥೆಗಳಲ್ಲಿ ತಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮೇಲೆ ರಾಜ್ಯ ಸರ್ಕಾರವನ್ನು ಇನ್ನಷ್ಟು ಒತ್ತಾಯಿಸಲು ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಧರಣಿ ನಿರತ ಕಿರಿಯ ವೈದ್ಯರು ಇಂದು ಮಂಗಳವಾರ ಕೆಲಸಕ್ಕೆ ಬಹಿಷ್ಕಾರ ಹಾಕಿ ತಮ್ಮ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ಬೇಡಿಕೆಗಳನ್ನು ಈಡೇರುವ ಯಾವುದೇ ಸಕಾರಾತ್ಮಕ ಮಾರ್ಗಗಳು ಸರ್ಕಾರದಿಂದ ನಮಗೆ ಕಾಣುತ್ತಿಲ್ಲ. ಇಂದು ಪ್ರತಿಭಟನೆಯ 52 ನೇ ದಿನವಾಗಿದೆ ನಮ್ಮ ಜೀವಕ್ಕೆ ಇನ್ನೂ ಭದ್ರತೆ ಸಿಕ್ಕಿಲ್ಲ. ನಮಗೆ ಸರ್ಕಾರ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳಲು ಯಾವುದೇ ಪ್ರಯತ್ನಗಳು ಆಗುತ್ತಿಲ್ಲ. ಹೀಗಿರುವಾಗ ಕರ್ತವ್ಯ ನಿಲ್ಲಿಸಿ ಮತ್ತೆ ಮುಷ್ಕರ ನಡೆಸುವುದು ಬಿಟ್ಟರೆ ನಮಗೆ ಅನ್ಯಮಾರ್ಗವಿಲ್ಲ ಎಂದು ಕರ್ತವ್ಯ ನಿರತ ವೈದ್ಯರು ಮಾಹಿತಿ ನೀಡಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!