Tuesday, August 16, 2022

Latest Posts

ಪಶ್ಚಿಮ ಬಂಗಾಳ ಚುನಾವಣೆ: ಕಾಂಗ್ರೆಸ್ ನಿಂದ 30 ಸ್ಟಾರ್​ ಕ್ಯಾಂಪೇನರ್​ ಲಿಸ್ಟ್​ ರಿಲೀಸ್​!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣೆಗೆ ಬರದ ಸಿದ್ಧತೆ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್​, ಬಿಜೆಪಿ ಜತೆ ಕಾಂಗ್ರೆಸ್​ ಕೂಡ ಕಣಕ್ಕಿಳಿದಿದ್ದು, ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಕಾಂಗ್ರೆಸ್ 30 ಸ್ಟಾರ್​ ಕ್ಯಾಂಪೇನರ್​ ಲಿಸ್ಟ್​ ರಿಲೀಸ್​ ಅಗಿದ್ದು, ಅದರಲ್ಲಿ ಪ್ರಮುಖವಾಗಿ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಮುಖರಾಗಿದ್ದಾರೆ.
ಉಳಿದಂತೆ ಸಚಿನ್​ ಪೈಲೆಟ್​,ಅಶೋಕ್​ ಗೆಹ್ಲೋಟ್​, ಅಮರೀಂದರ್​ ಸಿಂಗ್​​,ಬೂಪೇಶ್​ ಭಾಗ್ಲೇ,ಕಮಲನಾಥ್​​,
ಅದೀರ್ ರಂಜನ್ ಚೌಧರಿ, ಸಲ್ಮಾನ್​ ಖುರ್ಷಿದ್​,ರಂದೀಪ್​ ಸಿಂಗ್​ ಸುರ್ಜೇವಾಲ್​,ಜೀತಿನ್​ ಪ್ರಸಾದ್​,ಆರ್​​.ಪಿ.ಎನ್​ ಸಿಂಗ್​, ನವಜೋತ್​ ಸಿಂಗ್​ ಸಿಧು,ಅಬ್ದುಲ್​ ಮನನ್​, ಪ್ರದೀಪ್​ ಭಟ್ಟಾಚಾರ್ಯ, ಅಭಿಜಿತ್​​ ಮುಖರ್ಜಿ, ಮೊಹಮ್ಮದ್​ ಅಜರುದ್ದೀನ್​,ದೀಪ್​ ದಶ್​ಮುನಿ, ಎ.ಹೆಚ್.ಖಾನ್​ ಚೌಧರಿ,ದಿಪೇಂದ್ರ ಹೂಡಾ,ಅಖಿಲೇಶ್​​ ಪ್ರಸಾದ್​ ಸ ಇಂಗ್,ರಾಮೇಶ್ವರ್​ ಓರಾನ್,ಜೈವೀರ್​​​ ಶ್ರೀಗಿಲ್​,​​ಪವನ್​ ಖೇರ್​, ಬಿ.ಪಿ.ಸಿಂಗ್​, ಅಲ್ಮಗಿರ್​ ಆಲಂ ಇದ್ದಾರೆ. ಕರ್ನಾಟಕದ ಮಲ್ಲಿಕಾರ್ಜುನ್​ ಖರ್ಗೆ ಹಾಗೂ ಬಿ.ಕೆ.ಹರಿಪ್ರಸಾದ್​ ಕೂಡ ಸ್ಟಾರ್​ ಪ್ರಚಾರಕರ ಪಟ್ಟಿಯಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss