ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾ ತನ್ನ ತೈಲ ಬಾವಿಯೊಂದನ್ನು ಐಷಾರಾಮಿ ಅಮ್ಯೂಸ್ಮೆಂಟ್ ಪಾರ್ಕ್ ಆಗಿಸಿ ಪ್ರವಾಸೋದ್ಯಮದ ತಾಣವಾಗಿ ಬದಲಿಸುವ ಹೊಸ ಹೆಜ್ಜೆಯನ್ನಿಟ್ಟಿದೆ.
ಕಡಲಾಚೆಯ ವೇದಿಕೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಮೊದಲ ಪ್ರವಾಸ ತಾಣ ಇದಾಗಲಿದೆ. ಇದು ಒಟ್ಟು 1,50,000 ಚದರ ಮೀಟರ್ ಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿರಲಿದೆ. ಇದಕ್ಕೆ ‘ಎಕ್ಸ್ಟ್ರೀಮ್ ಪಾರ್ಕ್’ ಎಂದು ಹೆಸರಿಡಲಾಗಿದೆ ಎಂದು ವರದಿ ತಿಳಿಸಿದೆ.
ಏನಿದು ಎಕ್ಸ್ಟ್ರೀಮ್ ಪಾರ್ಕ್?
ಇದು ಸೌದಿ ಸರ್ಕಾರದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ನ ಸಹಾಯದಿಂದ ನಿರ್ಮಿಸಲಾಗುತ್ತಿರುವ ಪಾರ್ಕ್ ಇದು. ಇದರಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಸಾಹಸಿ ಕ್ರೀಡಾ ಚಟುವಟಿಕೆಗಳು ಇರಲಿವೆ.
ಇಲ್ಲಿ ರೋಲರ್ ಕೋಸ್ಟರ್, ಬಂಗೀ ಜಂಪಿಂಗ್, ಸ್ಕೈ ಡೈವಿಂಗ್ ನಂತರ ಸಾಹಸಿ ಕ್ರೀಡೆಗಳು ಜನರನ್ನು ರಂಜಿಸಲಿವೆ. ಪ್ರವಾಸಿಗರು ವಾಸಿಸಲು ಇದೇ ಪಾರ್ಕ್ ನೊಳಗೆ ಮೂರು ಹೊಟೇಲ್ ನ 800ಕ್ಕೂ ಹೆಚ್ಚು ಕೊಠಡಿಗಳು, 11 ರೆಸ್ಟೋರೆಂಟ್ ಗಳು ಹಾಗೂ ಒಂದು ಅಂಡರ್ ಸೀ ಡೈನಿಂಗ್.
ಇದು ದೇಶದ ಆರ್ಥಿಕತೆ ಮೌಲ್ಯಗಳನ್ನು ಸೇರಿ ಜಗತ್ತಿನ ಪ್ರಮುಖ ಪ್ರವಾಸಿ ತಾಣವಾಗಿಸಲು ಸೌದಿ ಪ್ರಯತ್ನಿಸುತ್ತಿದೆ.
ಈ ತೈಲ ಉತ್ಖನನದ ಸ್ಥಳ ಈಗ ದಿನಕ್ಕೆ ಸುಮಾರು 1,24,02,761 ಬ್ಯಾರೆಲ್ ತೈಲ ಉತ್ಪಾದಿಸುತ್ತದೆ. ಅಂದರೆ ವಿಶ್ವದ ಒಟ್ಟು ತೈಲದ ಶೇ.16ಕ್ಕಿಂತ ಹೆಚ್ಚು. ಸೌದಿಯ ಜಿಡಿಪಿ ಈ ತೈಲ ಉತ್ಪಾದನೆಯಿಂದಲೇ ಶೇ.30-40ರಷ್ಟಾಗುತ್ತಿದೆ.
ಆದರೆ ಈಗ ಸೌದಿ ಅರೇಬಿಯಾ ತೈಲೋತ್ಪನ್ನದ ಜೊತೆಗೆ ಸಾರ್ವಜನಿಕ ಸೇವಾ ವಲಯ ಹಾಗೂ ಪ್ರವಾಸೋದ್ಯಮದ ಮೂಲಕ ತನ್ನ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಯೋಜಿಸಿದೆ.