ಮೇಘನಾ ಶೆಟ್ಟಿ,ಶಿವಮೊಗ್ಗ
ಮೊದಲ ಬಾರಿಗೆ ಗಂಡು-ಹೆಣ್ಣು ನೋಡೋ ಕಾರ್ಯಕ್ರಮ ಯಾವಾಗಲೂ ಎಕ್ಸೈಟಿಂಗ್, ಅಂಗಡಿಯಿಂದ ತಂದ ಸಿಹಿತಿಂಡಿ, ಮನೆಯಲ್ಲಿ ಮಾಡಿದ ಉಪ್ಪಿಟ್ಟು, ರುಚಿಯಾದ ಕಾಫಿ.. ಮಾತು ಮಾತಿಗೂ ಒಂದೆರಡು ನಿಮಿಷ ಮೌನ!
ಇದೆಲ್ಲದೆ ನಡುವೆ ‘ಹೋಗಿ ಹುಡುಗ ಹುಡುಗಿ ಮಾತಾಡ್ಕೊಂಡ್ ಬನ್ನಿ’ ಎಂದು ಚಿಕ್ಕಪ್ಪ ಹೇಳುತ್ತಾರೆ. ಹುಡುಗ ಹುಡುಗಿ ರೂಂಗೆ ಹೋದ ಮೇಲೆ ಇಲ್ಲಿ ‘ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ, ಆದರೆ ಬಾಳಿ ಬದುಕಬೇಕಾದವರು ಅವರಲ್ವಾ?’ ಅಂತ ಒಂದು ಡೈಲಾಗ್!
ಈ ಪಾರ್ಟ್ ಎಲ್ಲರಿಗೂ ಗೊತ್ತು ಆದರೆ ಹುಡುಗ ಹುಡುಗಿ ಏನು ಮಾತನಾಡುತ್ತಾರೆ? ಅದರಲ್ಲೂ ಹೆಣ್ಣುಮಕ್ಕಳದು ಸ್ವಲ್ಪ ನಾಚಿಕೆ ಸ್ವಭಾವ ‘ಅವನೇ ಮಾತನಾಡಿಸಲಿ’ ಎಂತ ನಿಂತುಬಿಡುತ್ತಾರೆ. ನಿಮ್ಮಷ್ಟೇ ಭಯ, ಮುಜುಗರ ಅವರಿಗೂ ಇರುತ್ತದೆ. ಮದುವೆಗೂ ಮುನ್ನ ಹುಡುಗನ ಜೊತೆ ಮಾತನಾಡುವ ಈ ವಿಷಯಗಳನ್ನು ಕೇಳಿ…
- ಅವರ ಇಂಟ್ರೆಸ್ಟ್ಗಳ ಬಗ್ಗೆ ಗಮನ ಇರಲಿ,ಮುಂದೆ ಜೀವನದಲ್ಲಿ ನೀವಿಬ್ಬರೇ ಒಂದು ಮನೆಯಲ್ಲಿ ಇದ್ದಾಗ ಏನು ಮಾತಾಡ್ತೀರಾ? ಕಾಮನ್ ವಿಷಯ ಬೇಕು.
- ನೀವಾಗೇ ಕಾಂಪ್ಲಿಮೆಂಟ್ ಮಾಡೋದ್ರಲ್ಲಿ ತಪ್ಪೇನಿಲ್ಲ, ಎಲ್ಲರಿಗೂ ಫಸ್ಟ್ ಇಂಪ್ರೆಶನ್ ಮುಖ್ಯ. ಅನಿಸಿದರೆ ಕಾಂಪ್ಲಿಮೆಂಟ್ ನೀಡಿ.
- ಕುಟುಂಬದವರ ಬಗ್ಗೆ ಮಾಹಿತಿ ಕೇಳಿ. ಮಾತಿನ ಮಧ್ಯದಲ್ಲೇ ಅವರ ಫ್ಯಾಮಿಲಿ ಸ್ವಭಾವ, ಅಭ್ಯಾಸಗಳ ಬಗ್ಗೆ ತಿಳಿಯಿರಿ.
- ಡೈರೆಕ್ಟ್ ಆಗಿ ಹುಡುಗನ ಸಂಬಳದ ಬಗ್ಗೆ ಮಾತನಾಡಬೇಡಿ. ಕೆಲವೊಮ್ಮೆ ಹುಡುಗರಿಗೆ ದುಡ್ಡಿನ ವಿಷಯ ಮಾತನಾಡುವುದು ಹಿಡಿಸೋದಿಲ್ಲ. ಅದನ್ನು ದೊಡ್ಡವರಿಗೆ ಬಿಟ್ಟುಬಿಡಿ.
- ನಿಮ್ಮ ಹಾಬಿಗಳ ಬಗ್ಗೆಯೂ ಅವರಿಗೆ ಹೇಳಿ. ನೀವು ಪಾರ್ಟಿ ಮಾಡುತ್ತೀರೋ, ಹೆಚ್ಚು ಸ್ನೇಹಿತರಿದ್ದಾರೆ, ಟ್ರಾವೆಲ್ ಮಾಡುತ್ತೀರೋ ಎಲ್ಲವನ್ನೂ ಅವರಿಗೆ ಹೇಳಿ.
- ನಿಮ್ಮ ಮಾತುಗಳನ್ನು ಆಲಿಸುತ್ತಿದ್ದಾರಾ? ಅಥವಾ ಮೊಬೈಲ್ ನೋಡುತ್ತಾ ಸುಮ್ಮನೆ ಹು ಹು ಎನ್ನುತ್ತಾರಾ? ಗಮನಿಸಿ.
- ಮೊದಲ ಭೇಟಿ ಅಲ್ಲದಿದ್ದರೂ ಎರಡನೇ ಅಥವಾ ಮೂರನೇ ಭೇಟಿಯಲ್ಲಿ ಅವರ ಪಾಸ್ಟ್ ರಿಲೇಷನ್ಶಿಪ್ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಪಾಸ್ಟ್ ಬಗ್ಗೆಯೂ ಹೇಳಿದರೆ ಒಳ್ಳೆಯದು.
- ಅವರ ಆಫೀಸ್, ಬ್ರಾಂಚ್, ಡೆಸಿಗ್ನೇಶನ್ ಕೇಳಿಕೊಳ್ಳಿ. ಕೆಲವೊಮ್ಮೆ ಫ್ರಾಡ್ ಆಗುವ ಚಾನ್ಸ್ ಇದೆ.
- ಇಷ್ಟ ಪಟ್ಟು ಮದುವೆ ಆಗುತ್ತಿದೆಯೋ ಅಥವಾ ಮನೆಯವರ ಒತ್ತಾಯ ಇದೆಯೋ ಕೇಳಿಕೊಳ್ಳಿ.
- ಅರೇಂಜ್ ಮ್ಯಾರೇಜ್ ಬಗ್ಗೆ ಅವರ ವ್ಯಾಖ್ಯಾನ ಏನು? ಅರ್ಥಮಾಡಿಕೊಳ್ಳಿ.
- ನಿಮಗೆ ಯಾವ ರೀತಿ ಹುಡುಗಿ ಬೇಕು ಎನ್ನುವುದನ್ನು ಕೇಳಿ.
- ಮದುವೆ ಜವಾಬ್ದಾರಿಗೆ ರೆಡಿಯಾಗಿದ್ದಾರಾ ಕೇಳಿ.