ಬಾಲ್ಯದ ಆಘಾತಕಾರಿ ಘಟನೆಗಳು ನಮ್ಮನ್ನು ಏನೆಲ್ಲಾ ಮಾಡಬಹುದು? ದೈಹಿಕ, ಮಾನಸಿಕ ಆರೋಗ್ಯದ ಗತಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರಿಗೂ ಬಾಲ್ಯ ಸುಖದ ಸುಪ್ಪತ್ತಿಗೆಯಾಗಿರುವುದಿಲ್ಲ. ಬಾಲ್ಯದಲ್ಲಿ ಆಗುವ ಎಲ್ಲ ಅನುಭವಗಳು ನಮಗೆ ಜೀವನ ಪಾಠಗಳು. ತಂದೆ ತಾಯಿ ಜಗಳ, ಶಾಲೆಯಲ್ಲಿ ರ‍್ಯಾಗಿಂಗ್, ಲೈಂಗಿಕ ಕಿರುಕುಳ, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆಯಿಂದ ಕಿರಿಕಿರಿ, ದೊಡ್ಡವರ ಕುಡಿತದ ಗಲಾಟೆ ಹೀಗೆ ಹತ್ತು ಹಲವು.

ಈ ರೀತಿ ಬಾಲ್ಯದಲ್ಲಿ ಕೆಟ್ಟ ಅನುಭವ ಹೊಂದಿರುವವರು ಮುಂದೆ ಜೀವನದಲ್ಲಿ ಮಾನಸಿಕ ಅಥವಾ ದೈಹಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ವಿಷಯ ಬಹಿರಂಗಗೊಂಡಿದೆ.

So you had a bad childhood...ಬಾಲ್ಯದಲ್ಲಿ ತಾಗಿಸಿಕೊಂಡ ಯಾವುದೋ ಪೆಟ್ಟು ಮುಂದೆ ನಿಮಗೆ ತೊಂದರೆ ಕೊಡಬಹುದು. ಇನ್ನು ಮಾನಸಿಕ ಘಟನೆಗಳು ಖಿನ್ನತೆಗೆ ದೂಡಬಹುದು. ಜರ್ನಲ್ ಫ್ರಾಂಟಿಯರ‍್ಸ್ ಇನ್ ಸೈಕಿಯಾಟ್ರಿ ಡಿಆರ್‌ಐ ಹಾಗೂ ನೆವಡಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

Why Can't I Remember My Childhood? Causes and Solutionsಸೀರಿಯಲ್ ಕಿಲ್ಲರ್‌ಗಳು ಕೆಟ್ಟ ಬಾಲ್ಯವನ್ನು ಹೊಂದಿದ್ದರು ಎನ್ನುವ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಬಾಲ್ಯದಲ್ಲಿ ನಡೆದ ಕೆಟ್ಟ ಘಟನೆಗಳನ್ನು ಕೂಡಿ, ಕಳೆದು ಅದರಿಂದ ಹೊರಬರುವುದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಆದರೂ ಮನಸ್ಸಿನಾಳದಲ್ಲಿ ಅದು ಇದ್ದೇ ಇರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

How Childhood Memories Are Made and Retained | The Swaddleನಿರ್ಲಕ್ಷ್ಯ, ಬಡತನ, ಆಹಾರದ ಕೊರತೆ, ಲೈಂಗಿಕ ಕಿರುಕುಳ ಇಂಥ ಘಟನೆಗಳನ್ನು ಪರಿಹರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅಧ್ಯಯನ ನಡೆಸಿದ ಸಂಶೋಧಕ ಕರೆನ್ ಸ್ಕ್ಲಾಚ್ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!