ಮಕ್ಕಳಲ್ಲಿ ಕಿವಿ ಗುಗ್ಗಿ ಬೇಗ ಗಟ್ಟಿಯಾಗುತ್ತದೆ. ಕಿವಿಯಲ್ಲಿ ಗುಗ್ಗಿ ಗಟ್ಟಿಯಾದ್ರೆ ಕಿವಿ ನೋವು ಒಂದೇ ಅಲ್ಲ ಹಲ್ಲು ನೋವು ಕೂಡ ಬರುತ್ತದೆ. ಪದೇ ಪದೇ ವೈದ್ಯರ ಬಳಿ ಹೋಗಿ ಕಿವಿ ತೊಳೆಸುವುದು ಕೂಡ ಅಸಾಧ್ಯ. ಅದು ಕಿವಿಯ ದೃಷ್ಟಿಯಿಂದ ಒಳ್ಳೆಯದೂ ಅಲ್ಲ. ಅಂತಹ ಸಮಯದಲ್ಲಿ ಇಲ್ಲಿ ಕೆಳಗಿರುವ ಪವರ್ ಫುಲ್ ಮನೆಮದ್ದು ಟ್ರೈ ಮಾಡಿರಿ.
ಗ್ಲಿಸರಿನ್:
ಗ್ಲಿಸರಿನ್ ಹನಿಗಳನ್ನು ಕಿವಿಗೆ ಹಾಕಿದರೆ ಕಿವಿಯಲ್ಲಿ ಗಟ್ಟಿಯಾಗಿರುವ ಗುಗ್ಗಿ ಹೊರಬರುತ್ತದೆ. ತುರಿಕೆ ಕೂಡ ಕಡಿಮೆ ಆಗುತ್ತದೆ.
ಆಲಿವ್ ಎಣ್ಣೆ:
ಬಿಸಿ ಮಾಡಿದ ಆಲಿವ್ ಎಣ್ಣೆಯನ್ನು ಮೇಲೆ ಹೇಳಿದಂತೆ ಕಿವಿಗೆ ಹಾಕಿದರೆ ಗುಗ್ಗೆಯನ್ನು ಸಂಪೂರ್ಣವಾಗಿ ಹೊರಗೆ ತೆಗೆಯಬಹುದು. ಯಾವುದೇ ನೋವು ಕೂಡ ಅಗುವುದಿಲ್ಲ.
ಬೆಳ್ಳುಳ್ಳಿ:
ಕೊಬ್ಬರಿ ಎಣ್ಣೆಯೊಂದಿಗೆ ಒಂದೆರಡು ಎಸಳು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಆ ಎಣ್ಣೆಯನ್ನು ಕಿವಿಗೆ ಹಾಕಿದರೆ ಗುಗ್ಗಿ ಮೆತ್ತಗಾಗುತ್ತದೆ. ಈಸಿಯಾಗಿ ತೆಗೆಯಬಹುದು.
ಏಲಕ್ಕಿ ಎಣ್ಣೆ:
ಏಲಕ್ಕಿಯನ್ನು ಬಿಸಿ ಬಿಸಿ ಕೊಬ್ಬರಿ ಎಣ್ಣೆಗೆ ಹಾಕಿ ಬಿಸಿ ಮಾಡಿ. ನಂತರ ಆ ಎಣ್ಣೆ ಕಿವಿಗೆ ಹಾಕಿ. ಏಲಕ್ಕಿ ಕಿವಿಗೆ ಹೋಗದಂತೆ ಎಚ್ಚರ ವಹಿಸಬೇಕು. ಏಲಕ್ಕಿ ಎಣ್ಣೆ ಕಿವಿ ನೋವಿದ್ದರೂ ಕೂಡ ಹೋಗುತ್ತದೆ.
ಕೊಬ್ಬರಿ ಎಣ್ಣೆ:
ಮಗುವಿನ ಕಿವಿಗೆ ತಿಂಗಳಿಗೊಮ್ಮೆ ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿ ಹಾಕುತ್ತಿರಿ. ಕಿವಿ ಗುಗ್ಗೆ ಗಟ್ಟಿಯಾಗುವುದಿಲ್ಲ.
ಕಾಟನ್:
ಆಚೆ ಹೋಗುವಾಗ ಮಗುವಿನ ಕಿವಿಗೆ ಗಾಳಿ ಹೋಗದಂತೆ ಹತ್ತಿ ಹಾಕಿ. ಗಾಳಿ ಕಿವಿಯೊಳಗೆ ಹೋದರೆ ಗುಗ್ಗಿ ಗಟ್ಟಿಯಾಗುತ್ತದೆ. ಕಿವಿ ನೋವು ಕೂಡ ಬರುತ್ತದೆ.