spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತ- ಇಂಗ್ಲೆಂಡ್​ ನಡುವಿನ 5ನೇ ಟೆಸ್ಟ್​ ಪಂದ್ಯ ರದ್ದಾಗಲು ಕಾರಣವೇನು? ಗಂಗೂಲಿ ಮಾಹಿತಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ಹಾಗೂ ಇಂಗ್ಲೆಂಡ್​ ತಂಡಗಳ ನಡುವಿನ 5ನೇ ಟೆಸ್ಟ್​ ಪಂದ್ಯ ರದ್ದುಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾಹಿತಿ ನೀಡಿದ್ದಾರೆ.
ಉಭಯ ತಂಡಗಳ ನಡುವೆ ಫೈನಲ್ ಟೆಸ್ಟ್​ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ಗಂಟೆ ಬಾಕಿ ಇದ್ದಾಗ ಪಂದ್ಯ ರದ್ಧಾಗಿದೆ ಎಂದು ಘೋಷಿಸಿಲಾಗಿತ್ತು. ಈ ಬಗ್ಗೆ ಈಗಾಗಲೇ ಇಂಗ್ಲೆಂಡ್​ನ ಅನೇಕ ಮಾಜಿ ಕ್ರಿಕೆಟರ್ಸ್​​ ಗಂಭೀರ ಆರೋಪ ಮಾಡಿದ್ದು, ಐಪಿಎಲ್​ಗೋಸ್ಕರ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ನಮ್ಮ ಆಟಗಾರರು 5ನೇ ಟೆಸ್ಟ್​​ ಪಂದ್ಯ ಆಡಲು ನಿರಾಕರಿಸಿದ್ದರು. ಅದಕ್ಕೋಸ್ಕರ ನಾವು ಪ್ಲೇಯರ್ಸ್​ಗಳನ್ನು ದೂಷಿಸುವುದು ಸರಿಯಲ್ಲ. ಬಿಸಿಸಿಐ ಜವಾಬ್ದಾರಿಯುತ ಕ್ರಿಕೆಟ್ ಮಂಡಳಿಯಾಗಿದೆ. ನಾವು ಇತರೆ ಕ್ರಿಕೆಟ್ ಬೋರ್ಡ್​ಗಳಿಗೂ ಗೌರವ ನೀಡುತ್ತೇವೆ. ಕ್ರಿಕೆಟರ್ಸ್​ ಆರೋಗ್ಯ ದೃಷ್ಠಿಯಿಂದ ವಿಚಾರ ಮಾಡಿದಾಗ ಅವರು ನಡೆದುಕೊಂಡಿರುವುದು ಸರಿಯಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಇನ್ನು ಉಭಯ ತಂಡಗಳ ಪಂದ್ಯ ರದ್ದತಿ ವಿಚಾರವಾಗಿ ಮಾತನಾಡಲು ಗಂಗೂಲಿ ಸೆಪ್ಟೆಂಬರ್​​​ 22ರಂದು ಇಂಗ್ಲೆಂಡ್​ಗೆ ಪ್ರಯಾಣ ಕೈಗೊಳ್ಳಲಿದ್ದು, ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಎಲ್ಲ ಪ್ಲೇಯರ್ಸ್​ ದುಬೈಗೆ ಆಗಮಿಸಿದ್ದು, ಸೆಪ್ಟೆಂಬರ್​​ 19ರಿಂದ ಆರಂಭಗೊಳ್ಳಲಿರುವ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss