spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗರ್ಭಿಣಿಯರಿಗೆ ಹೆಚ್ಚಾಗಿ ಕಾಡುವ ಮಲಬದ್ಧತೆಗೆ ಇಲ್ಲಿದೆ ಸುಲಭ ಉಪಾಯ…

- Advertisement -Nitte

ನಾಲ್ವರಲ್ಲಿ ಮೂವರು ಗರ್ಭಿಣಿಯರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಊಟ ಸೇರದ ಕಾರಣ ಅಜೀರ್ಣ, ಗ್ಯಾಸ್‌ನಂತಹ ಸಮಸ್ಯೆ ಕೂಡ ಕಾಡುತ್ತದೆ. ಈ ಸಮಯದಲ್ಲಿ ಹೆಚ್ಚು ಫೈಬರ್ ಆಹಾರಗಳನ್ನು ಮಹಿಳೆಯರು ಸೇವಿಸಬೇಕು. ಏನು ಮಾಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ ನೋಡೋಣ ಬನ್ನಿ..

  • ಪ್ರತಿದಿನವೂ 25-30 ಗ್ರಾಂ ಫೈಬರ್ ನಿಮ್ಮ ದೇಹಕ್ಕೆ ಸೇರಬೇಕು. ಫೈಬರ್ ಆಹಾರಗಳಾದ ಸೊಪ್ಪು, ತರಕಾರಿ, ಹಣ್ಣು, ಬೀನ್ಸ್, ಬಟಾಣಿ, ಕಾಳು ಬೇಳೆಗಳನ್ನು ತಪ್ಪದೇ ಸೇವಿಸಿ.
  • ಒಂದೇ ಜಾಗದಲ್ಲಿ ಕೂರುವುದು ಅಥವಾ ಹೆಚ್ಚು ನಿದ್ದೆ ಮಾಡುವ ಅಭ್ಯಾಸ ಬೇಡ.
  • ವ್ಯಾಯಾಮ, ವಾಕ್ ಅಥವಾ ಯೋಗ ಯಾವುದಾದರೂ ಒಂದನ್ನು ರೂಢಿ ಮಾಡಿ. ಫಿಸಿಕಲಿ ಆಕ್ಟೀವ್ ಆಗಿರುವುದು ಮುಖ್ಯ.
  • ಅತಿ ಹೆಚ್ಚು ನೀರು ಕುಡಿಯಿರಿ.ಇಬ್ಬರಿಗೆ ಸಾಲುವಷ್ಟು ನೀರು ಕುಡಿದರೆ ಇನ್ನೂ ಒಳ್ಳೆಯದು.
  • ಕ್ರೇವಿಂಗ್ಸ್ ಅಥವಾ ಹೆಚ್ಚು ತಿನ್ನಬೇಕು ಎನ್ನುವ ಭರದಲ್ಲಿ ಒಂದೇ ಸಲ ಎಲ್ಲಾ ಆಹಾರ ತಿನ್ನಬೇಡಿ. ಐದು ಹೊತ್ತು ಸ್ವಲ್ಪವೇ ಆಹಾರ ಸೇವಿಸಿ.
  • ವೈದ್ಯರ ಸಲಹೆ ಪಡೆಯದೇ ಸಿಕ್ಕ ಸಿಕ್ಕ ವ್ಯಾಯಾಮ ಮಾಡಬೇಡಿ. ವೈದ್ಯರ ಸಲಹೆ ಇಲ್ಲಿ ತುಂಬಾನೇ ಮುಖ್ಯ.
  • ಕೆಲವರಿಗೆ ಈ ಸಮಯದಲ್ಲಿ ಆಹಾರ ಸೇರುವುದಿಲ್ಲ. ಅಗತ್ಯಕ್ಕಿಂತ ಕಡಿಮೆ ತಿನ್ನುವ ಕಾರಣ ಮಲಬದ್ಧತೆ ಆಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss