ವಿಶ್ವಕಪ್ ಸೆ‌ಮೀಸ್‌, ಫೈನಲ್‌ ವೇಳೆ ಮಳೆ ಕಾಡಿದರೆ ಯಾವ ತಂಡ ವಿನ್?‌ ಹೀಗಿದೆ ನೋಡಿ ಹೊಸ ರೂಲ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್ ನಲ್ಲಿಗ ಸೆಮೀಸ್‌ ಲೆಕ್ಕಾಚಾರಗಳು ನಡೆಯುತ್ತಿವೆ. ಪಂದ್ಯಾವಳಿಯುದ್ದಕ್ಕೂ ಹಲವು ಪಂದ್ಯಗಳಿಗೆ ಮಳೆ ಅಡ್ಡಯಾಗಿದ್ದರಿಂದ ಕೆಲ ತಂಡಗಳ ಸೆಮೀಸ್‌ ಆಸೆಗೆ ನೀರೆರಚಿದಂತಾಗಿದೆ. ಇದೀಗ ಸೆಮೀಸ್‌ ಹಾಗೂ ಫೈನಲ್‌ ಪಂದ್ಯಗಳಲ್ಲಿ ಮಳೆ ಅಡ್ಡಿಯಾದರೆ ಪಂದ್ಯದ ಫಲಿತಾಂಶವನ್ನು ನಿರ್ಣಯಿಸುವುದು ಹೇಗೆ ಎಂಬುದರ ಬಗ್ಗೆ ಐಸಿಸಿ ಸ್ಪಷ್ಟೀಕರಣ ನೀಡಿದೆ.
ಸಾಮಾನ್ಯವಾಗಿ, ಮಳೆ ಕಾಡಿದ ಟಿ 20 ಪಂದ್ಯದಲ್ಲಿ ಫಲಿತಾಂಶವನ್ನು ಪಡೆಯಲು ಕನಿಷ್ಠ 5 ಓವರ್‌ಗಳನ್ನು ಆಡಿಸಲಾಗುತ್ತದೆ. ಅದಾಗ್ಯೂ ಮಳೆ ನಿಲ್ಲದೆ  ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆದರೆ ಐಸಿಸಿ ವಿಶ್ವಕಪ್‌ ನಾಕೌಟ್‌ ಪಂದ್ಯಗಳಲ್ಲಿ ಈ ನಿಯಮ ಬದಲಾಯಿಸಲಾಗಿದ್ದು, ಇಲ್ಲಿ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 10 ಓವರ್‌ಗಳನ್ನು ಬೌಲ್ ಮಾಡಬೇಕು. ಒಂದು ವೇಳೆ ತಂಡವು ಪಂದ್ಯದಲ್ಲಿ ಕನಿಷ್ಠ 10 ಓವರ್‌ಗಳ ಮಾನದಂಡವನ್ನು ಎದುರಿಸಲು ಸಾಧ್ಯವಾಗದಿದ್ದರೆ ಐಸಿಸಿ, ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಿದೆ. ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ ಮರುದಿನವೇ ಪಂದ್ಯ ನಡೆಯಲಿದೆ.
ಮೀಸಲು ದಿನದಂದು ಪ್ರತಿ ಇನಿಂಗ್ಸ್‌ನಲ್ಲಿ ತಂಡಗಳು 10 ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ
ಲೀಗ್‌ ಪಾಯಿಂಟ್‌ಗಳ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನವನ್ನು ಗಳಿಸಿದ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಫೈನಲ್‌ ಮೀಸಲು ದಿನ ಮಳೆ ಕಾಡಿದರೆ ಇಬ್ಬರು ಫೈನಲಿಸ್ಟ್‌ಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!