ಕಾಂತಾರ ಚಿತ್ರ ಕಂಡು ನಟ ಕಮಲ್ ಹಾಸನ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂತಾರ ಚಿತ್ರಕ್ಕೆ ಎಲ್ಲೆಡೆ ಅಪಾರ ಮೆಚ್ಚುಗೆ ಸಿಗುತ್ತಿದ್ದು, 50೦ ದಿನ ಕಳೆದರು ಸಿನಿಮಾದ ಕ್ರೆಜ್ ಇನ್ನು ಕಡಿಮೆಯಾಗಿಲ್ಲ. ಈಗಾಗಲೇ ಅನೇಕ ಗಣ್ಯರು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಕಮಲ್ ಹಾಸನ್ ಕೂಡ, ಕಾಂತಾರ ಕನ್ನಡ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರೆ.
ಶುಕ್ರವಾರ ಅವರು ಕಾಂತಾರ ಸಿನಿಮಾ ವೀಕ್ಷಿಸಿ, ರಿಷಭ್ ಶೆಟ್ಟಿ ಅವರಿಗೆ ಬೆನ್ನು ತಟ್ಟಿದ್ದಾರೆ. ಅಲ್ಲದೇ, ರಿಷಭ್ ಅವರು ಕತೆ ಹೇಳಿದ ರೀತಿ ಪ್ರೇರಣಾದಾಯಕವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಚಿತ್ರವು ಜಗತ್ತಿನಾದ್ಯಂತ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಭಾರತದಲ್ಲೇ ಸುಮಾರು 9000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಚಿತ್ರವು ಪ್ರದರ್ಶನವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!